skip to main |
skip to sidebar
ಉದಯ ರವಿಯೊಡನೆ ಸಕಲವೂ ಗೋಚರ
ಆರಂಭವಾಗುವುದು ಮುಂಜಾನೆ ಸಂಚಾರ
ಪುಟ್ಟ ಮಗುವೊಂದು ಮನಸ ತಟ್ಟುವುದು ತೀರಾ
ಆ ನೋಟಕಾಗುವುದು ಹೃದಯವು ಭಾರ
ಓಡಾಡುವ ಜನರೆಷ್ಟೋ ಆ ಪಾರ್ಕಿನೊಳಗೆ
ಇದರ ಪರಿವೆಯಿಲ್ಲ ಆ ಮಗುವಿನೊಳಗೆ
ಅಲ್ಲೇ ಅದರಾಟ, ಪುಟ್ಟ ಗುಡಿಸಲಿನ ಹೊರಗೆಕಿತ್ತ ಬಾಟಲಿಯ ಸೂತ್ರವಿದೆ, ಅವನ ಕೈಯೊಳಗೆ
ಅವನ ಲೋಕಕೆ, ಅವನೇ ರಾಜ ಆ ಮರದ ಕೆಳಗೆ
ಮೇಲೆ ಹಾರಲು ಬಾಟಲಿ, ಕೆಳಗೆ ಸಂತಸದ ಬುಗ್ಗೆ
ಅಷ್ಟರಲಿ ಕರೆಯುವನು, ಅಲ್ಲಿರುವ ತಂದೆ
ಬಿಟ್ಟು ಬರುವನು ಹುಡುಗ, ಓಡೋಡಿ ಮುಂದೆ
ಓಡಿಸಲು, ಕಿತ್ತಾಡುವ ನಾಯಿಯ ಮಂದೆ
ಇದೇ ಅವರ ದಿನ ನಿತ್ಯದ ಧಂದೆ
ಸ್ಥಾಪಿಸಲು ಪಾರ್ಕಿನೊಳು ಶಾಂತಿಯ ಸುಧೆ ಅತ್ತ ಬಾನಂಗಳದಲಿ ಏರೋ ಇಂಡಿಯಾ ಹಾರಾಟ
ಶ್ರೀಮಂತ ಮಕ್ಕಳ ಸಂತಸದ ಕೂಗಾಟ
ತಿಂಡಿ ತೀರ್ಥಗಳು, ಮಿಕ್ಕಿ, ಚೆಲ್ಲಾಟ
ಇತ್ತ ಕೂಳು ಅನ್ನಕಾಗಿ ಪರದಾಟ
ಮತ್ತೆ ಸಾಗುವುದು ಕಿತ್ತ ಬಾಟಲಿಯ ಆಟ
ನೋಡುಗರ ಮನದಲ್ಲಿ ಏನೂ ಮಾಡಲಾಗದ ಚಟಪಟ...
ಯಾರು ಬಲ್ಲರು ಆ ದೇವರ ಮಾಯದಾಟ ?
ಸೂತ್ರ ಅವನ ಕೈಯಲ್ಲಿ, ನಾವು ಬರಿಯ ಪಟ !!
ಕಾಯುತಿರುವೆ ನಾ, ನಿನಗಾಗಿ ಸಂಗಾತಿ
ಭೂಮಿ ಆಗಸದಿ ನೋಡಿದಂತೆ ತಲೆಯೆತ್ತಿ
ಯಾವ ಮೇಘವು ವರ್ಷ ಸೂಸುವುದೋ
ಎಂದು ಎಲ್ಲೆಡೆಯು ತಂಪ ತರುವುದೋ
ಆದರೇನು? ಈಗಿನ್ನೂ ಚಳಿಗಾಲವಲ್ಲಾ?
ಎಲ್ಲೆಡೆಯು ಅರಸುತಿದೆ ಮನವಿಂದು ಬಯಸುತಿದೆ
ಬಾಳ ಗೀತೆಯ ಸ್ವರವಾಗುವ ಗೆಳೆಯನನು
ಹೃದಯ ರಾಗಕೆ ತಾಳವಾಗುವ ಇನಿಯನನು
ಒಂಟಿ ಜೀವನ ಮುಗಿಸುವ ಜಂಟಿ ವಾದ್ಯವನು
ಆದರೇನು? ನಾನಿನ್ನೂ ಸಂಗೀತ ಕಲಿತಿಲ್ಲವಲ್ಲಾ ?
ಕೊನೆಗೂ ಮಳೆಗಾಲ ಬಂದಿತ್ತು
ಮೇಘವೊಂದು ವರ್ಷ ಸುರಿದಿತ್ತು
ನಾನೂ ಸಂಗೀತ ಕಲಿತಿದ್ದೆ
ಜತೆ ವಾದ್ಯದಿ ಗೀತೆಯ ಹಾಡಿದ್ದೆ
ಮನವದು ನಲ್ಲನ ಜೊತೆಗಿತ್ತು
ಖುಷಿಯಲಿ ಹಿರಿ ಹಿರಿ ಹಿಗ್ಗಿತ್ತು
ಆದರೇನು.........?
ರಾತ್ರಿಯ ಕನಸದು ಮುಗಿದಿತ್ತು
ತನು ಮನ ಜೊತೆಯಲಿ ನೊಂದಿತ್ತು !!
ಈ ಕವನ, ಬಾಳ ವೀಣೆಯನ್ನು ಮೀಟಲಿರುವ ವೈಣಿಕನನ್ನು ನೆನೆಯುತ್ತಾ...
ಯಾಕೋ ಹರಿಯುತಿದೆ ಸದ್ದಿಲ್ಲದೆ ಕಣ್ಣೀರುಹೃದಯದಲಿ ಮಡುಗಟ್ಟಿವೆ ನೋವುಗಳು ನೂರಾರುಒಂದು ಕ್ಷಣ ಮಾತ್ರ ಅನಿಸಿದ್ದು ನಿಜವಿಂದು ನಾನೂ ಆಗಬೇಕಿತ್ತು ಹುಡುಗನೆಂದು!ಷರ್ಟ ಜೇಬಲಿ ಫೋನನು ಮಿಂಚಿಸಿಅದರ ಬಾಲವನು ಕಿವಿಯಲ್ಲಿ ತುರುಕಿಸಿವಾಹನ ಚಾಲನೆಯಲೂ ಸಂಗೀತವನಾಲಿಸಿಮಜಾ ಉಡಾಯಿಸುವ ಹುಡುಗರ ನೋಡುತಿರೆತಪ್ಪೇ ಹೀಗೆಂದು ಅನಿಸಿದರೆ -"ನಾನೂ ಹುಡುಗನಾಗಿದ್ದರೆ?"ಆಫೀಸು ಬಾಗಿಲಲಿ ಗಂಟೆ ಎಂಟಾದಾಗಇರುಳುಗತ್ತಲಲಿ ಭಯ ಬಳಿಗೆ ಸುಳಿದಾಗಗಂಟೆ ಕಾದರೂ ಬಸ್ಸು ಬರದಾಗಮತ್ತೆ ಮತ್ತೆ ಗಡಿಯಾರದಿ ದೃಷ್ಟಿ ಹರಿಸುವಾಗನನಗೂ ಅನಿಸಿದ್ದು ನಿಜವಿಂದುಆಗಬೇಕಿತ್ತು ನಾ ಹುಡುಗನೆಂದು!
"ಹುಡುಗಿ ನಾನೆಂದು ಚಿಂತೆ ನಿಮಗೇಕೆ?"ಎಂದು ವಾದಿಸುವ ಈ ನನ್ನ ಮನಕೆಸದಾ ಜೊತೆಗಿರುವ ಭಾರೀ ಛಲಕೆಹೀಗೆಲ್ಲಾ ಅನಿಸುತಿರೆ ಇನ್ನೇನು ಬೇಕೆ?ಸ್ನೇಹಿತರೇ,
ಈ ಕವನದ ಶೀರ್ಷಿಕೆ "ಒಂದು ಕ್ಷಣ ಅನಿಸಿದ್ದು" - ಯಾಕೆಂದರೆ ಆ ಭಾವನೆ ಬಂದಿದ್ದು ಬರಿಯ ಒಂದು ಕ್ಷಣ ಮಾತ್ರ! ಹುಡುಗಿಯೊಬ್ಬಳಿಗೆ ಈ ನಮ್ಮ ಸಮಾಜದಲ್ಲಿ ಇರುವ ನಿರ್ಬಂಧಗಳು, ಒಂದು ಕ್ಷಣ ಹಾಗೆ ಅನಿಸುವಂತೆ ಮಾಡಿದ್ದು ನಿಜ... ಆದರೆ, ಹಾಗೆ ಅನಿಸಿದ ಕ್ಷಣಗಳನ್ನೆಲ್ಲಾ ಕವನದಲ್ಲಿ ಬರೆಯಾಗಲಿಲ್ಲ... ಅದೇನೇ ಇರಲಿ, ಆ ಭಾವನೆಗಳೆಲ್ಲಾ ಕ್ಷಣಿಕ ; "ಹುಡುಗಿಯಾಗಿ ಹುಟ್ಟಿದ್ದಕ್ಕೆ ಸದಾ ಹೆಮ್ಮೆ ಪಡುವವಳು ನಾನು!" - ಇದು ಮಾತ್ರ ಸತ್ಯ
ಹುಟ್ಟುತಿದೆ ಧ್ವನಿಯೊಂದುಹೊರಡಿಸದೆ ಸದ್ದುಹೃದಯದಲಿ ಹೊರಡುತಿದೆ
ಬಾಯಲ್ಲಿ ಅಡಗುತಿದೆಕೇಳಿಸುತಿಲ್ಲವೇ ಹತ್ತಿರದವರೇಎರಡಡಿ ಅಂತರ ದೂರದವರೇಹೇಳದೆ ನಿಮಗೆ ತಿಳಿಯುವುದಿಲ್ಲಹೇಳಲು ನನಗೆ ದನಿಯಿಲ್ಲಪಡೆಯಿರಿ ಒಂದಿನ ನನ್ನಯ ಸ್ಥಾನದಿನದಾದ್ಯಂತ ಪಾಲಿಸಿ ಮೌನಬಾಯಿಗೆ ದೊಡ್ಡ ಬೀಗವ ಜಡಿಯಿರಿಕಿವಿಗೆ ಮಾತ್ರ ಕೆಲಸವ ಕೊಡಿರಿತಿಳಿವುದು ಆಗ ದಿಟ ಏನೆಂದುಒಂಟಿತನದ ನೋವೇನೆಂದುಆದರೂ ಬೇಡ ನಿಮಗಾಕಷ್ಟಅನುಬಂಧವಿರಲಿ ನೀರಂತೆ ಸ್ಪಷ್ಟಹೇಗೆ ನಾ ಹೇಳಲಿ ನಾನೇನೆಂದುನಿಮ್ಮೊಡನೆ ಆಗಲಿ ನಾನೂ ಒಂದುಬರುವುದೇ ಆ ದಿನ ಬಾಳಲಿ ಒಮ್ಮೆಈ ಕವನ ಮುಗಿವುದೆ ಎಂದಾದರೊಮ್ಮೆ
ಕಾಡುತಿದೆ ಪ್ರಶ್ನೆ ಮನದಾಳದಲ್ಲಿ"ನಾನೆಂಬ" ಒಗಟಿಗೆ ಉತ್ತರವದೆಲ್ಲಿ?
ಸತ್ಯ - ಭ್ರಮೆಯ ಅಂತರಆಗುತಿದೆ ಅಗೋಚರದರ್ಪಣದ ಮುಂದಿದೆ ಈ ದಿವ್ಯ ಬಿಂಬನೋಡುತಿಹರೆಲ್ಲ ಒಳಗಿರುವ ಪ್ರತಿಬಿಂಬ ಕಾಣುತಿಹರೆಲ್ಲ ಏನೋ ಸಂಪೂರ್ಣತೆನನಗಷ್ಟೇ ಕಾಣುತಿದೆ ಎಲ್ಲೋ ಕೊರತೆನಿಜ ಯಾವುದಿದರೊಳಗೆ ಎಂಬುದೇ ಚಿಂತೆಕರುಣಾಳು ಶಕ್ತಿಯೇ, ಬಂದೆನ್ನ ಸಂತೈಸುನಿಜವಾದ "ನಾನು" ಏನೆಂದು ಮನಗಾಣಿಸು
ಅವಳು ಬಂದರೆ ಹತ್ತಿರಏನು ಹೇಳಲಿ ಉತ್ತರನನ್ನನೇಕೆ ಕೊಟ್ಟಿರೆಂದು?ಅದೇನು ಎಂತದು ಒದಗಿತೆಂದು ?ಕೊಟ್ಟರವಳನು ಹೆಣ್ಣು ಮಗುವನು
ಅಮ್ಮನಿಲ್ಲದ ಪುಟ್ಟ ಮಗುವನುಮಳೆಯ ಸುರಿಸುವ ಮೇಘವನ್ನುಕುಲವ ಬೆಳಗುವ ದೀಪವನ್ನು"ಕೊಟ್ಟ ಹೆಣ್ಣು ಕುಲಕೆ ಹೊರಗೆ"ಗಾದೆ ನೆನೆಸುತ ಅಂದು ನಾವುಎಂದೋ ಕೊಡುವುದ ಇಂದೇ ಕೊಟ್ಟೆವುಎಂದೆನುತ್ತಾ ಕೈಯ ತೊಳೆದೆವುಎಲ್ಲೋ ಇರುವ ಪುಟ್ಟ ಹುಡುಗಿಬಾಳು ಧೈರ್ಯದಿ ಕಷ್ಟ ನುಂಗಿನಮ್ಮ ಜೊತೆಯಲಿ ನಮ್ಮ ಸಂಗಡಇರುವೆ ನೀನು ಇಂದು ಕೂಡ
ಓ ಪೃಥ್ವಿ ಹೇಳೇ, ಸಾಕಾಗದೇ ನಿನಗೆ
ದಿನಾ ಸುತ್ತುತಾ ಅದೇ ದಿನಕರನಿಗೆ
ಕೇಳೇ ಒಮ್ಮೆ ನನ್ನಯ ಪಾಡು
ದಿನಾ ಹಾಡುವೆ ಒಂದೇ ಹಾಡು
ಮುಂಜಾನೆಯಾದೊಡೆ ಹೊರಡುವ ಅವಸರ
ಪ್ರತಿ ಹೆಜ್ಜೆಗೂ ಹೆಚ್ಚುವ ಆತುರಮತ್ತೆ ಬರುವ ಬಸ್ಸಿಗೆ ಕಾಯುತಾ
ಸದಾ ಕಾಯುವ ಮುಖಗಳ ನೋಡುತಾ
ಸಂಚಾರ ದೀಪದಿ ಬೆಳಗಲು ಕೆಂಪು
ಮಂಪರು ಕಣ್ಣಿಗೆ ಬರುವುದು ಜೊಂಪು
ಬೆಳಗಲು ಅಲ್ಲಿ ಹಚ್ಚನೆ ಹಸಿರು
ಎಲ್ಲರ ಮುಖದಲಿ ನೆಮ್ಮದಿ ನಿಟ್ಟುಸಿರು
ಎಲ್ಲರ ಗುರಿಯು ಗಮ್ಯದ ಕಡೆಗೆ
ಆದಷ್ಟು ಬೇಗ ಅದ ತಲುಪುವೆಡೆಗೆ
ಸಂಜೆಯಾದೊಡೆ ಮರಳಿ ಗೂಡಿಗೆ
ಮತ್ತೊಂದು ದಿನದ ಸಮರದ ತಯಾರಿಗೆ
ಮತ್ತದೇ ಮುಂಜಾನೆ ದಿನದಾರಂಭ
ಅದೇ ರಾಗ ತಾಳದ ಸಂಗೀತ ಸೌರಭ
ಒಂದೇ ಧ್ವನಿ ಸುರುಳಿಯ ನುಡಿಸಿದಂತೆ
ತಿರುಗಿಸಿ ಮತ್ತೆ ಮತ್ತೆ ಮತ್ತೆ !!