Wednesday, January 7, 2009

ಏನು ಹೇಳಲಿ ?

ಅವಳು ಬಂದರೆ ಹತ್ತಿರ
ಏನು ಹೇಳಲಿ ಉತ್ತರ
ನನ್ನನೇಕೆ ಕೊಟ್ಟಿರೆಂದು?
ಅದೇನು ಎಂತದು ಒದಗಿತೆಂದು ?

ಕೊಟ್ಟರವಳನು ಹೆಣ್ಣು ಮಗುವನು
ಅಮ್ಮನಿಲ್ಲದ ಪುಟ್ಟ ಮಗುವನು
ಮಳೆಯ ಸುರಿಸುವ ಮೇಘವನ್ನು
ಕುಲವ ಬೆಳಗುವ ದೀಪವನ್ನು

"ಕೊಟ್ಟ ಹೆಣ್ಣು ಕುಲಕೆ ಹೊರಗೆ"
ಗಾದೆ ನೆನೆಸುತ ಅಂದು ನಾವು
ಎಂದೋ ಕೊಡುವುದ ಇಂದೇ ಕೊಟ್ಟೆವು
ಎಂದೆನುತ್ತಾ ಕೈಯ ತೊಳೆದೆವು

ಎಲ್ಲೋ ಇರುವ ಪುಟ್ಟ ಹುಡುಗಿ
ಬಾಳು ಧೈರ್ಯದಿ ಕಷ್ಟ ನುಂಗಿ
ನಮ್ಮ ಜೊತೆಯಲಿ ನಮ್ಮ ಸಂಗಡ
ಇರುವೆ ನೀನು ಇಂದು ಕೂಡ

2 comments:

  1. ದಿವ್ಯ ಇದು ನನಗೆ ತುಂಬ ಇಷ್ಟವಾದ ಕವನ, ಬಹಳ ಅರ್ಥಗರ್ಭಿತವಾಗಿದೆ. ನಾನು ಅ ಭಗವಂತನಲ್ಲಿ ಬೇಡಿಕೊಳ್ತೀನಿ ನಿನಗೆ ಅ ಮಗುವಿನ ಪ್ರಶ್ನೆಗಳಿಗೆ ಉತ್ತರಿಸುವ ದಿನ ಬಾರದೆ ಇರಲಿ ಎಂದು.
    ನನ್ನನೇಕೆ ಕೊಟ್ಟಿರೆಂದು?
    ಅದೇನು ಎಂತದು ಒದಗಿ ಬಂದು? ಇದನ್ನು ಹೀಗೆ ಬರೆದರೆ ಚೆನ್ನಾಗಿರುತ್ತೆ ಅನ್ಸುತ್ತೆ
    ಅದೇನು ಎಂತದು ಒದಗಿತೆಂದು?
    ಕೊಟ್ಟರವಳನು ಹೆಣ್ಣು ಮಗುವನು .ಇದನ್ನು ಹೀಗೆ ಬರೆದರೆ ಚೆನ್ನಾಗಿರುತ್ತೆ ಅನ್ಸುತ್ತೆ
    ಕೊಟೆವಾದಿನ ಹೆಣ್ಣು ಮಗುವನು. (kottevaadina svalpa spelling mistake could not get it properly
    :( )

    ReplyDelete
  2. Hey Bhavya.. tumba thanks kane.. really good suggestions.. I better change it that way :)

    ReplyDelete