ಓ ಪೃಥ್ವಿ ಹೇಳೇ, ಸಾಕಾಗದೇ ನಿನಗೆ
ದಿನಾ ಸುತ್ತುತಾ ಅದೇ ದಿನಕರನಿಗೆ
ಕೇಳೇ ಒಮ್ಮೆ ನನ್ನಯ ಪಾಡು
ದಿನಾ ಹಾಡುವೆ ಒಂದೇ ಹಾಡು
ಮುಂಜಾನೆಯಾದೊಡೆ ಹೊರಡುವ ಅವಸರ
ಪ್ರತಿ ಹೆಜ್ಜೆಗೂ ಹೆಚ್ಚುವ ಆತುರ
ಮತ್ತೆ ಬರುವ ಬಸ್ಸಿಗೆ ಕಾಯುತಾ
ಸದಾ ಕಾಯುವ ಮುಖಗಳ ನೋಡುತಾ
ಸಂಚಾರ ದೀಪದಿ ಬೆಳಗಲು ಕೆಂಪು
ಮಂಪರು ಕಣ್ಣಿಗೆ ಬರುವುದು ಜೊಂಪು
ಬೆಳಗಲು ಅಲ್ಲಿ ಹಚ್ಚನೆ ಹಸಿರು
ಎಲ್ಲರ ಮುಖದಲಿ ನೆಮ್ಮದಿ ನಿಟ್ಟುಸಿರು
ಎಲ್ಲರ ಗುರಿಯು ಗಮ್ಯದ ಕಡೆಗೆ
ಆದಷ್ಟು ಬೇಗ ಅದ ತಲುಪುವೆಡೆಗೆ
ಸಂಜೆಯಾದೊಡೆ ಮರಳಿ ಗೂಡಿಗೆ
ಮತ್ತೊಂದು ದಿನದ ಸಮರದ ತಯಾರಿಗೆ
ಮತ್ತದೇ ಮುಂಜಾನೆ ದಿನದಾರಂಭ
ಅದೇ ರಾಗ ತಾಳದ ಸಂಗೀತ ಸೌರಭ
ಒಂದೇ ಧ್ವನಿ ಸುರುಳಿಯ ನುಡಿಸಿದಂತೆ
ತಿರುಗಿಸಿ ಮತ್ತೆ ಮತ್ತೆ ಮತ್ತೆ !!
ಗೀಜಗದ ಸೋಜಿಗ...
5 months ago
good job divya and well-written poems. all the best. :-)
ReplyDeleteಅಭಿನಂದನೆಗಳು ದಿವ್ಯ ಕವನಗಳನ್ನು ಬರೆದಿದ್ದಕ್ಕೆ.ನಿನ್ನ ಚೇತನ ಅನಿಕೇತನವಾಗಿರಲಿ ಎಂದು ಹರಸುವೆ.
ReplyDeleteಕವನ ಓದಿ, ಬ್ಲಾಗ್ ನೋಡಿ ಅಭಿಪ್ರಾಯ ಹೇಳಿದವರಿಗೆಲ್ಲಾ ಹೃತ್ಪೂರ್ವಕ ಧನ್ಯವಾದಗಳು :)
ReplyDelete