ಸುಯ್ ಸುಯ್ ಎನ್ನುತಿರುವ ಕುಕ್ಕರ್
ನೀನು ಅಡುಗೆ ಮನೆ ಒಳ ಹೋದದ್ದೇ
ಜೋರಾಗಿ ಉದ್ದುದ್ದ ಸೀಟಿ ಹಾಕುತ್ತದೆ
ಎಣ್ಣೆಯಲಿ ನೀ ಕರಿಯುವ ಹಪ್ಪಳ
ನಿನ್ನ ನೋಡುತ್ತಾ ಮುಖ ಅರಳಿಸುತ್ತಾ
ಖುಷಿಯಲ್ಲಿ ಊರಗಲವಾಗುತ್ತೆ
ನಿನ್ನ ಬಳೆಗಳ ನಾದವ ಕೇಳುತ್ತಾ
ತುರಿ ಮಣೆಯು ಆನಂದದಿಂದ
ಪಟ ಪಟನೆ ಕಾಯಿಯ ತುರಿಯುತ್ತದೆ
ಒಗ್ಗರಣೆಯ ಸಾಸಿವೆ ಕಣಗಳೋ
ನಾ ಮುಂದು ತಾ ಮುಂದು ಎಂದು
ನಿನ್ನೆಡೆ ಬರಲು ಚಡಪಡಿಸುತ್ತವೆ
ಅಲ್ಲಿ ಒಳಗೆ ಅಡುಗೆ ಮನೆಯಲ್ಲಿ
ಎಲ್ಲಾ ನಿನ್ನೊಡನೆ ಸರಸವಾಡುವವರೆ
ನನ್ನ ಅನುಪಸ್ಥಿತಿಯಲಿ
ನೆನಪಿರಲಿ ನನ್ನ ರಾಣಿ
ನಾನಿಲ್ಲಿ ಕಾದುಕುಳಿತಿರುವೆ
ನಿನ್ನ ಬರವನ್ನು ಇದಿರು ನೋಡುತ್ತಾ
ನಿನ್ನ ಕೈ ರುಚಿ ಸವಿಯಲು ಕಾಯುತ್ತಾ...
ಹಸಿರು ಬಾಲದ ಸೂರಕ್ಕಿ-Green-tailed Sunbird.
2 weeks ago
 
 
 Posts
Posts
 
 

Very sweet lines.
ReplyDeleteಮದುವೆ ಮುಂಚೆ ಹುಡುಗಿಗೆ ನಂತರ ಅವಳು ಕರಿಯುವ ಹಪ್ಪಳಕ್ಕೆ ಕಾಯುವುದೇ ಆಯಿತು ಹುಡಗರ ಜೀವನ!
ReplyDeletewow amazing just loved it.. tummb chanagide nim imagination.. i wish my hubby should tell this to me ;):)
ReplyDeleteNice lines ... :)
ReplyDeleteಚೆನ್ನಾಗಿದೆ.. ನಿಜವಾಗಲು ಇನಿಯ ಹೇಳಿದ್ದಾ ? ಅಥವಾ ನೀವು ಇನಿಯನಾಗಿ ಬರದಿದ್ದಾ ..?
ReplyDeleteDivya - nimma observations chennagive...
ReplyDelete