Friday, March 20, 2009

ಹನಿ..


ಇರಬೇಕು ಶಾಪ ನಮ್ಮನೆಯ ನಳಕೆ
ಮಹಾಭಾರತದ ಕರ್ಣನಂತೆ
ಬೇಕಿರಲು ಬರದ ವಿದ್ಯೆಯಂತೆ

ಸಂಜೆ ತಿರುಗಿಸಿದರೆ ಭೋರ್ಗರೆವ ಬಿಸಿನೀರು
ಭೋರೆಂದು ಅಳುವ ನವ ವಧುವಿನಂತೆ
ಮುಂಜಾನೆ ನೋಡಲು ತಂಪನೆ ತಣ್ಣೀರು
ಬೆಟ್ಟದಿಂ ತೊಟ್ಟಿಕ್ಕುವ ಹನಿ ತೀರ್ಥದಂತೆ !

4 comments:

  1. ದಿವ್ಯ,
    ನೈಜತೆ ನೇರ ಸಾಲುಗಳಲ್ಲಿ ಕವನವಾದಾಗ ಮಧುರ ಮತ್ತು ಅಪ್ಯಾಯಮಾನವಾಗಿರುತ್ತದೆ. ಕವನ ಚೆನ್ನಾಗಿದೆ, ತುಂಬಾನೇ ಇಷ್ಟವಾಯಿತು.

    ReplyDelete
  2. ಧನ್ಯವಾದಗಳು ರಾಜೇಶ್,
    ಹೌದು; ನೀವಂದಂತೆ, ಈ ಕವನದಲ್ಲಿರುವುದು ನಿಜದ ವಿಷಯವೇ.. ಮುಂಜಾನೆ ತಣ್ಣೀರು ಬಿಡಿ, ನೀರೂ ಬರದ ದಿನವೊಂದರ, ನಳದ ಮೇಲಿನ ಕೋಪವೇ ಈ ಕವನದ ಜನನಕ್ಕೆ ಕಾರಣ :)

    ReplyDelete