

ಪ್ರಕೃತಿಯ ಮಡಿಲಿನ ಸೃಷ್ಟಿ ನೂರಾರು
ಗಿಡ ಮರ ಬಳ್ಳಿ ನದಿ ತೊರೆ ನೀರು
ಒಂದೆಡೆ ಪರ್ವತ ಒಂದೆಡೆ ಇಳಿಜಾರು
ಕರ್ತನ ಮಹಿಮೆ ತಿಳಿಯದವರಾರು?
ಜುಳು ಜುಳು ಹರಿವ ನದಿಯೊಂದ ಕಂಡು
ಅಳುತ್ತಿತ್ತು ಒಳಗೊಳಗೇ ಹಿಮ ನದಿಯೊಂದು
ಮೇಲ್ನೋಟಕೆ ತಾನು, ಬರಿ ಮಂಜಾದರೇನು
ಹರಿಯುವೆನು ಒಳಗೊಳಗೇ ನನ್ನೊಳು ನಾನು
ತಟಸ್ಥ ನಿರ್ಜೀವಿ ನೋಡುಗರಿಗೆಲ್ಲಾ
ಮೋಹಕ ಸಂಜೀವಿ, ನಿಜ ತಿಳಿದವರಿಗೆಲ್ಲಾ
ಬೇಸರಿಸುತಿತ್ತೊಂದು ಎಲೆ ಮರೆಯ ಕಾಯಿ
ನೋಡುವರೇ ಇಲ್ಲೆಂದು ಚಪ್ಪರಿಸಿ ಬಾಯಿ
ಬರಿಗಣ್ಣಿಗೆ ನಾ ಕಾಣದಿರೆ ಏನು
ಪಕ್ವವಾಗಿಹೆನು ಮರೆಯಲ್ಲಿ ನಾನು
ಬೀಸಲು ಗಾಳಿ ಆಗುವೆನು ಗೋಚರ
ಮೂಡಿಸುವೆ ನನ್ನಿರುವನು ಮನದಲಿ ಎಲ್ಲರ
ಹರಿಯುವ ನದಿಗೆ ಅದರದೇ ಚಿಂತೆ
ಬಂದು ಸೇರುವುದದಕೆ ಎಲ್ಲ ಅಂತೆ-ಕಂತೆ
ಸರ್ವ ಗೋಚರ ಕಾಯಿಗೆ ತನ್ನದೇ ಯೋಚನೆ
ಭಯವದಕೆ ನೆನೆಸಿ ಕಲ್ಲೇಟಿನ ಬೇನೆ
ಬೇಗುದಿಯು ಇರುವುದು, ಪ್ರತಿಯೊಂದು ಜೀವಕ್ಕೆ
ಯೋಚನಾ ಲಹರಿ, ಅವರವರ ಭಾವಕ್ಕೆ...
Great.. I Liked it.. keep it up... keep posting
ReplyDeleteThanks Nitin...
ReplyDeleteದಿವ್ಯಾರವರೆ...
ReplyDeleteಕೊನೆಯ ಸಾಲು ಬಹಳ ಇಷ್ಟವಾಯಿತು..
"ಬೇಗುದಿಯು ಇರುವದು ಪ್ರತಿಯೊಂದು ಜೀವಕ್ಕೆ
ಯೋಚನಾ ಲಹರಿ ಅವರವರ ಭಾವಕ್ಕೆ"
ಚಂದದ ಕವನಕ್ಕೆ
ಅಭಿನಂದನೆಗಳು...
ನಿಮ್ಮ ಅಭಿನಂದನೆಗೆ ತುಂಬು ಹೃದಯದ ಧನ್ಯವಾದಗಳು...ಭಾವ ಜೀವ ತಳೆದಾಗ ನೋಡಲು ಬರುತ್ತಿರಿ :)
ReplyDeleteಜುಳು ಜುಳು ಹರಿವ ನದಿಯೊಂದ ಕಂಡು
ReplyDeleteಅಳುತ್ತಿತ್ತು ಒಳಗೊಳಗೇ ಹಿಮ ನದಿಯೊಂದು
ಮೇಲ್ನೋಟಕೆ ತಾನು, ಬರಿ ಮಂಜಾದರೇನು
ಹರಿಯುವೆನು ಒಳಗೊಳಗೇ ನನ್ನೊಳು ನಾನು
ದಿವ್ಯ ಅವ್ರೇ
ಈ ಸಾಲುಗಳು ಚನ್ನಾಗಿವೆ..ನೋಡೋದೆಲ್ಲಾ ಅಥ್ವಾ ಕಾಣೋದೆಲ್ಲಾ ನಿಜವಲ್ಲ ಅನ್ನೋ ಅರ್ಥಭರಿತ ಬಾವಮಂಥನದ ಸಾಲುಗಳು ನನಗೆ ಇಷ್ಟವಾದವು