ಹೃದಯದಲಿ ಮಡುಗಟ್ಟಿವೆ ನೋವುಗಳು ನೂರಾರು
ಒಂದು ಕ್ಷಣ ಮಾತ್ರ ಅನಿಸಿದ್ದು ನಿಜವಿಂದು
ನಾನೂ ಆಗಬೇಕಿತ್ತು ಹುಡುಗನೆಂದು!
ಷರ್ಟ ಜೇಬಲಿ ಫೋನನು ಮಿಂಚಿಸಿ
ಅದರ ಬಾಲವನು ಕಿವಿಯಲ್ಲಿ ತುರುಕಿಸಿ
ವಾಹನ ಚಾಲನೆಯಲೂ ಸಂಗೀತವನಾಲಿಸಿ
ಮಜಾ ಉಡಾಯಿಸುವ ಹುಡುಗರ ನೋಡುತಿರೆ
ತಪ್ಪೇ ಹೀಗೆಂದು ಅನಿಸಿದರೆ -
"ನಾನೂ ಹುಡುಗನಾಗಿದ್ದರೆ?"
ಆಫೀಸು ಬಾಗಿಲಲಿ ಗಂಟೆ ಎಂಟಾದಾಗ
ಇರುಳುಗತ್ತಲಲಿ ಭಯ ಬಳಿಗೆ ಸುಳಿದಾಗ
ಗಂಟೆ ಕಾದರೂ ಬಸ್ಸು ಬರದಾಗ
ಮತ್ತೆ ಮತ್ತೆ ಗಡಿಯಾರದಿ ದೃಷ್ಟಿ ಹರಿಸುವಾಗ
ನನಗೂ ಅನಿಸಿದ್ದು ನಿಜವಿಂದು
ಆಗಬೇಕಿತ್ತು ನಾ ಹುಡುಗನೆಂದು!

"ಹುಡುಗಿ ನಾನೆಂದು ಚಿಂತೆ ನಿಮಗೇಕೆ?"
ಎಂದು ವಾದಿಸುವ ಈ ನನ್ನ ಮನಕೆ
ಸದಾ ಜೊತೆಗಿರುವ ಭಾರೀ ಛಲಕೆ
ಹೀಗೆಲ್ಲಾ ಅನಿಸುತಿರೆ ಇನ್ನೇನು ಬೇಕೆ?
ಸ್ನೇಹಿತರೇ,
ಈ ಕವನದ ಶೀರ್ಷಿಕೆ "ಒಂದು ಕ್ಷಣ ಅನಿಸಿದ್ದು" - ಯಾಕೆಂದರೆ ಆ ಭಾವನೆ ಬಂದಿದ್ದು ಬರಿಯ ಒಂದು ಕ್ಷಣ ಮಾತ್ರ! ಹುಡುಗಿಯೊಬ್ಬಳಿಗೆ ಈ ನಮ್ಮ ಸಮಾಜದಲ್ಲಿ ಇರುವ ನಿರ್ಬಂಧಗಳು, ಒಂದು ಕ್ಷಣ ಹಾಗೆ ಅನಿಸುವಂತೆ ಮಾಡಿದ್ದು ನಿಜ... ಆದರೆ, ಹಾಗೆ ಅನಿಸಿದ ಕ್ಷಣಗಳನ್ನೆಲ್ಲಾ ಕವನದಲ್ಲಿ ಬರೆಯಾಗಲಿಲ್ಲ... ಅದೇನೇ ಇರಲಿ, ಆ ಭಾವನೆಗಳೆಲ್ಲಾ ಕ್ಷಣಿಕ ; "ಹುಡುಗಿಯಾಗಿ ಹುಟ್ಟಿದ್ದಕ್ಕೆ ಸದಾ ಹೆಮ್ಮೆ ಪಡುವವಳು ನಾನು!" - ಇದು ಮಾತ್ರ ಸತ್ಯ
even i am getting the same feelings sometime....adanna kavanada roopadalli horahommisiddakke danyavadagalu...its realy nice divya
ReplyDeleteThanks very much Chaithra for your encouraging words :)
ReplyDeleteTumba chennagi barediddiya..
ReplyDeleteBavaji liked your poems too...
Thanks Ramyakka and Bavaji :)
ReplyDelete