"Bhaava Jeeva Taledaaga" - "When feeling gets life" is a blog created for making a collection of my self-written poems and other self creations under one roof. In the heavy and mechanical life of today's era, feelings are hardly alive. But, now and then, things around us make our feelings alive ! Here are the lines which got life when felt through heart...
ಯಾಕೋ ಹರಿಯುತಿದೆ ಸದ್ದಿಲ್ಲದೆ ಕಣ್ಣೀರು ಹೃದಯದಲಿ ಮಡುಗಟ್ಟಿವೆ ನೋವುಗಳು ನೂರಾರು ಒಂದು ಕ್ಷಣ ಮಾತ್ರ ಅನಿಸಿದ್ದು ನಿಜವಿಂದು ನಾನೂ ಆಗಬೇಕಿತ್ತು ಹುಡುಗನೆಂದು!
ಷರ್ಟ ಜೇಬಲಿ ಫೋನನು ಮಿಂಚಿಸಿ ಅದರ ಬಾಲವನು ಕಿವಿಯಲ್ಲಿ ತುರುಕಿಸಿ ವಾಹನ ಚಾಲನೆಯಲೂ ಸಂಗೀತವನಾಲಿಸಿ ಮಜಾ ಉಡಾಯಿಸುವ ಹುಡುಗರ ನೋಡುತಿರೆ ತಪ್ಪೇ ಹೀಗೆಂದು ಅನಿಸಿದರೆ - "ನಾನೂ ಹುಡುಗನಾಗಿದ್ದರೆ?"
ಆಫೀಸು ಬಾಗಿಲಲಿ ಗಂಟೆ ಎಂಟಾದಾಗ ಇರುಳುಗತ್ತಲಲಿ ಭಯ ಬಳಿಗೆ ಸುಳಿದಾಗ ಗಂಟೆ ಕಾದರೂ ಬಸ್ಸು ಬರದಾಗ ಮತ್ತೆ ಮತ್ತೆ ಗಡಿಯಾರದಿ ದೃಷ್ಟಿ ಹರಿಸುವಾಗ ನನಗೂ ಅನಿಸಿದ್ದು ನಿಜವಿಂದು ಆಗಬೇಕಿತ್ತು ನಾ ಹುಡುಗನೆಂದು!
"ಹುಡುಗಿ ನಾನೆಂದು ಚಿಂತೆ ನಿಮಗೇಕೆ?" ಎಂದು ವಾದಿಸುವ ಈ ನನ್ನ ಮನಕೆ ಸದಾ ಜೊತೆಗಿರುವ ಭಾರೀ ಛಲಕೆ ಹೀಗೆಲ್ಲಾ ಅನಿಸುತಿರೆ ಇನ್ನೇನು ಬೇಕೆ?
ಸ್ನೇಹಿತರೇ, ಈ ಕವನದ ಶೀರ್ಷಿಕೆ "ಒಂದು ಕ್ಷಣ ಅನಿಸಿದ್ದು" - ಯಾಕೆಂದರೆ ಆ ಭಾವನೆ ಬಂದಿದ್ದು ಬರಿಯ ಒಂದು ಕ್ಷಣ ಮಾತ್ರ! ಹುಡುಗಿಯೊಬ್ಬಳಿಗೆ ಈ ನಮ್ಮ ಸಮಾಜದಲ್ಲಿ ಇರುವ ನಿರ್ಬಂಧಗಳು, ಒಂದು ಕ್ಷಣ ಹಾಗೆ ಅನಿಸುವಂತೆ ಮಾಡಿದ್ದು ನಿಜ... ಆದರೆ, ಹಾಗೆ ಅನಿಸಿದ ಕ್ಷಣಗಳನ್ನೆಲ್ಲಾ ಕವನದಲ್ಲಿ ಬರೆಯಾಗಲಿಲ್ಲ... ಅದೇನೇ ಇರಲಿ, ಆ ಭಾವನೆಗಳೆಲ್ಲಾ ಕ್ಷಣಿಕ ; "ಹುಡುಗಿಯಾಗಿ ಹುಟ್ಟಿದ್ದಕ್ಕೆ ಸದಾ ಹೆಮ್ಮೆ ಪಡುವವಳು ನಾನು!" - ಇದು ಮಾತ್ರ ಸತ್ಯ
ಓ ಪೃಥ್ವಿ ಹೇಳೇ, ಸಾಕಾಗದೇ ನಿನಗೆ ದಿನಾ ಸುತ್ತುತಾ ಅದೇ ದಿನಕರನಿಗೆ ಕೇಳೇ ಒಮ್ಮೆ ನನ್ನಯ ಪಾಡು ದಿನಾ ಹಾಡುವೆ ಒಂದೇ ಹಾಡು
ಮುಂಜಾನೆಯಾದೊಡೆ ಹೊರಡುವ ಅವಸರ ಪ್ರತಿ ಹೆಜ್ಜೆಗೂ ಹೆಚ್ಚುವ ಆತುರ ಮತ್ತೆ ಬರುವ ಬಸ್ಸಿಗೆ ಕಾಯುತಾ ಸದಾ ಕಾಯುವ ಮುಖಗಳ ನೋಡುತಾ ಸಂಚಾರ ದೀಪದಿ ಬೆಳಗಲು ಕೆಂಪು ಮಂಪರು ಕಣ್ಣಿಗೆ ಬರುವುದು ಜೊಂಪು ಬೆಳಗಲು ಅಲ್ಲಿ ಹಚ್ಚನೆ ಹಸಿರು ಎಲ್ಲರ ಮುಖದಲಿ ನೆಮ್ಮದಿ ನಿಟ್ಟುಸಿರು
ಎಲ್ಲರ ಗುರಿಯು ಗಮ್ಯದ ಕಡೆಗೆ ಆದಷ್ಟು ಬೇಗ ಅದ ತಲುಪುವೆಡೆಗೆ ಸಂಜೆಯಾದೊಡೆ ಮರಳಿ ಗೂಡಿಗೆ ಮತ್ತೊಂದು ದಿನದ ಸಮರದ ತಯಾರಿಗೆ
ಮತ್ತದೇ ಮುಂಜಾನೆ ದಿನದಾರಂಭ ಅದೇ ರಾಗ ತಾಳದ ಸಂಗೀತ ಸೌರಭ ಒಂದೇ ಧ್ವನಿ ಸುರುಳಿಯ ನುಡಿಸಿದಂತೆ ತಿರುಗಿಸಿ ಮತ್ತೆ ಮತ್ತೆ ಮತ್ತೆ !!
In this big city you are my companion, There is no limit to the happiness you give me Your company, will make my sadness to go far With your company my day ends happily
At the time when I am alone, If you are there how beautiful At night if you don't whisper in my ears Sleep doesn't come to me
If I leave you and go somewhere You will follow me in bus, car I go, And then also to the shopping mall I go, Even in my mouth, your "Mantra"
O my dear, FM Radio How nice the songs you play Sweet combination of old and new Happy "Sa Re Ga Ma" to the lonely heart