ದಿನ ಮುಗಿದು ಕ್ಯಾಲೆಂಡರಿನಿಂದ
ಮಗುಚಿ ಹೋಗಲು ಇನ್ನೇನು
ಕೊನೆಯ ಹದಿನೈದು ನಿಮಿಷಗಳಿವೆ
ಎಂಬ ಕ್ಷಣದಲ್ಲಿ
"ಭಾವ ಜೀವ ತಳೆದಾಗ" ಕ್ಕೆ
ಎರಡು ವರುಷ ತುಂಬಿದ
ಸವಿ ನೆನಪಿನ ಈ ದಿನದಂದು
ಅತಿ ಪುಟ್ಟ ಏನನ್ನಾದರೂ ಬರೆದು
ಇದೇ ದಿನ ಹಾಕಲೇಬೇಕೆಂಬ
ಹುಚ್ಚು ಹುನ್ನಾರಕ್ಕೆ ಬಿದ್ದು
ಸರಸರನೆ ಚಕಚಕನೆ
ಬರೆದ ಸಾಲುಗಳಿಗೆ
ಏನು ಹೆಸರಿಡಬೇಕೆಂದು
ತಿಣಕಾಡುತ್ತಾ ತಲೆ ಕೆರೆದಾಗ
ಕಂಡದ್ದು ಹದಿನೈದು ಸಾಲುಗಳು!
ಉತ್ತಿ ಬಿತ್ತಿದ್ದು
9 months ago