-ಬೀಚಿಯವರ 'ನನ್ನ ಭಯಾಗ್ರಫಿ'ಯಲ್ಲಿ ಬರುವ ಹರಪನ ಹಳ್ಳಿಯ ಒಬ್ಬ ಅಜ್ಜಿ ತನ್ನ ಗಂಡನ ಬಗ್ಗೆ ಹೇಳುವ ಮಾತಿನಿಂದ ಪ್ರೇರಿತವಾಗಿ ಜನಿಸಿದ ಸಾಲುಗಳು!
ನಿನ್ನೆ ನಡೆದ ಏನೋ ಕಲಹಕೆ
ಇಬ್ಬರೊಳು ಮೂಡಿದ ಭಿನ್ನ ಮತಕೆ
ಮಾತಿಗೆ ಮಾತು ಬೆಳೆದು
ಚರ್ಚೆ ಎತ್ತೆತ್ತಲೋ ಹರಿದು
ಅವನು ಪೂರ್ವಕೆ ಅವಳು ಪಶ್ಚಿಮಕೆ
ಮುಖ ಮಾಡಿ ಮಲಗಿರಲು,
ನಗಿಸುವ ಪಣ ತೊಟ್ಟವ ಅಳಿಸುತ್ತಿರಲು,
ಅವಳ ಮನದಲ್ಲೊಮ್ಮೆ ಅನಿಸಿದ್ದು ನಿಜವಂದು-
"ಛೇ ನನ್ನ ಹಣೆಯಲ್ಲಿ ಬರೆದಿದ್ದೆ ಈ ಥರವೇ?"
ಎಂದು!!
ಆದರೆ...
ಮುಂಜಾನೆ ಬಚ್ಚಲಲಿ ಯೋಚನಾ ಗುಂಗಲ್ಲಿ
ಸಾಬೂನು ಹಚ್ಚಿ ಕಣ್ಮುಚ್ಚಿ ಬಗ್ಗಲು,
ಚಾಚಿದ್ದ ನಳದ ತುದಿಯು ಫಟಾರನೆ ರಭಸದಿ
ಹಣೆಯ ಮಧ್ಯಕ್ಕೆ ಬಡಿದು ಕೆಂಪು ಬರೆ ಬರಲು
ತಡೆಯಲಾಗದ ನೋವಲಿ ಕಣ್ಣೀರು ಹರಿದಿರಲು
ಓಡೋಡಿ ಬಂದು ಆತ ಸಂತೈಸುತಿರಲು
ಇದ್ದೆಲ್ಲ ಪ್ರೀತಿಯನು ಧಾರೆಯೆರೆಯಲು
ಮತ್ತೆ ನಗೆ ಹೂವು ಮನದಲ್ಲಿ ಅರಳಿರಲು
ದಿನವು ಸಂತಸದಿ ಸಾಗುತ್ತಲಿರಲು
ಹಣೆ ಬರಹ ಹಳಿದ ತಪ್ಪಿಗೆ ನೊಂದಳು
ಅದೇನಿದ್ದರೂ...
ಅವನು ನನ್ನವನು
ನಾನವನ ಮನದರಸಿ
ಸಮರಸವೇ ಜೀವನ
ಎಂದೆನುತ್ತಾ ನಿನ್ನೆ ಮರೆತಳು
ಉತ್ತಿ ಬಿತ್ತಿದ್ದು
9 months ago
ಭಲೆ!! ಎಷ್ಟು ರಸವತ್ತಾಗಿದೆ ಕವನ ದಿವ್ಯಾ!!!!!
ReplyDelete:-)
ಮಾಲತಿ ಎಸ್.
Divya really nice one... :-)
ReplyDeletereally suuper....:)
ReplyDeleteVery nice one..
ReplyDeletenice one:-)
ReplyDeleteGood one,,,, ತುಂಬಾ ಚೆನ್ನಾಗಿ ಇದೆ...
ReplyDeleteGuru
Thumba chennagide divya... madhuravaagi moodi bnadide kavana..
ReplyDeleteಪ್ರತಿಕ್ರಿಯಿಸಿದ ಎಲ್ಲರಿಗೂ ನನ್ನ ಪ್ರೀತಿಯ ಕೃತಜ್ಞತೆಗಳು
ReplyDelete-ದಿವ್ಯಾ
modala bari ninna Blog oduttiruve... tumba kushi ayitu :)
ReplyDelete