Tuesday, March 16, 2010

ಆರಂಭ


ಹೊಸ ವರುಷದ ನವ ವಸಂತಕೆ
ನೂತನ ಬದುಕಿನ ನವೀನ ಚಿತ್ರಕೆ
ಜೊತೆಸೇರಿ ನಾವು ರೇಖೆ ಎಳೆಯೋಣ
ಸುಂದರ ನಕಾಶೆಯ ಸಿದ್ಧಪಡಿಸೋಣ
ರಂಗುಗಳ ಸಂಗ್ರಹವ ಆರಂಭಿಸೋಣ

ಮಾಮರದ ಹೊಚ್ಚ-ಹೊಸ ಚಿಗುರಿಗೆ
ಚೈತ್ರದ ಮಧುರ ಬಿಸಿಲ ಝಳಕೆ
ಕೋಗಿಲೆ ನಲಿಯುತಾ ಹಾಡಿರಲು
ನನ್ನೆದೆಯ ತುಂಬಾ ಕಾರಂಜಿ ನರ್ತನ
ತಂಪನೆರೆವ ನಿನ್ನ ಸಾಮೀಪ್ಯದ ಪುಳಕಕೆ

ಸಾಗೋಣ ಬಾ ನಾವಿನ್ನು ಜೊತೆಯಾಗಿ
ಜೀವನ ತೇರಿನ ಜೋಡಿ ಹಯವಾಗಿ
ಚೈತ್ರದ ಚಂದ್ರಮ ನಮಗಾಗಿ ಕಾದಿಹನು
ಬೆಳಕ ಸೂಸುತಾ ಸ್ವಾಗತ ಕೋರಿಹನು
ನಮ್ಮ ಸಂಗಮಕೆ ಕಾಯುತಿಹನು

ನಾವು ಜೊತೆಗಿರುವ ಕ್ಷಣಗಳೆಲ್ಲಾ
ಅಂತ್ಯವಿಲ್ಲದ ಯುಗಗಳಾಗಲಿ
ನಾನಾಗುವೆನು ಯುಗಾದಿ
ನೀನಾಗು ಯುಗಪುರುಷ
ಕೂಡಿ ಹಾಡೋಣ ಬಾ
ನಮ್ಮ ಬಾಳ ಯುಗಳ ಗೀತೆಯನು

11 comments:

  1. ಸೊಗಸಾದ ಕವನ...
    ನಿಮಗೆಲ್ಲರಿಗೂ ಯುಗಾದಿಯ ಶುಭಹಾರೈಕೆಗಳು....
    ಹೊಸ ವರುಷ ಇನ್ನಷ್ಟು ಹರುಷವನ್ನು ತರಲಿ...

    ReplyDelete
  2. ಕವನ ಚೆನ್ನಾಗಿದೆ. ಯುಗಾದಿ ಹಬ್ಬದ ಶುಭಾಶಯಗಳು.

    ReplyDelete
  3. ಕವನ ತುಂಬಾ ಚೆನ್ನಾಗಿ ಇದೆ ದಿವ್ಯ...
    ನಿಮಗೂ ನಿಮ್ಮ ಕುಟುಂಬದವರಿಗೂ ಯುಗಾದಿ ಹಬ್ಬದ ಶುಬಾಶಯಗಳು
    ಗುರು

    ReplyDelete
  4. ಹೊಸ ವರುಷದ, ಹೊಸ ಕವನವು ತುಂಬಾ ಚೆನ್ನಾಗಿದೆ,ಹೀಗೆ ಮು೦ದುವರಿಯಲಿ ಎ೦ದು ಹಾರೈಸುವೆ......

    ReplyDelete
  5. Nice poem...:)
    Ugadiya Shubhashayagalu-D.Madagaonkar

    ReplyDelete
  6. ಸುಂದರ ಕವನ
    ಉಗಾದಿಯ ಶುಭಾಶಯಗಳು

    ReplyDelete
  7. ಉಗಾದಿಯ ಗಾದಿಯ ಮೇಲೆ ಕುಳಿತ ನೀವು ದಿವ್ಯ ಕನಸಿಗೆ ನಾಂದಿಹಾಡುವುದು ಅದೂ ಭಾವಮಂಥಿತ ಕವನದ ಮೂಲಕ....ಚನ್ನಾಗಿದೆ...ಶುಭಾಷಯ ನಿಮಗೆ ಯುಗಾದಿಗೆ..

    ReplyDelete
  8. ondu kathe bareyuva prayatna maadiddene..... odi, anisike heLi.....

    ReplyDelete
  9. Divya... chennagide nimma kavana... taDavaagi bandidene.. aadaru hosa varushada shubhashayagaLu... samaya sikkaaga nanna blog ge omme bheTi kodi.. nimma anisikeyannu tiLisi...

    ReplyDelete