Wednesday, October 28, 2009

ಕನ್ನಡಿ Vs ಹೆಣ್ಣು


ತ್ರಿಪುರ ಸುಂದರಿ ಹೆಣ್ಣಿಗೆ
ತನ್ನ ಮೊಗದ ಚೆಲುವನ್ನು
ತಾ ನೋಡಲಾಗದಿರುವುದು
ದೇವರು ಕೊಟ್ಟ ಶಿಕ್ಷೆ...
ಕನ್ನಡಿಯೇ ಆಕೆಗೆ ಶ್ರೀ ರಕ್ಷೆ


******************************************************

ಕಾರಣ ತಿಳಿಯಲಿಲ್ಲ ಯಾರಿಗೂ ಅಂದು
ಲೇಡಿಸ್ ಹಾಸ್ಟೆಲಿನ ಆ ಕನ್ನಡಿ
ಯಾಕೆ ಒಡೆದು ಹೋಯಿತೆಂದು...
ಹಿಂದಿದ್ದ ಗೋಡೆಗೆ ಮಾತ್ರ ತಿಳಿದಿತ್ತು
ರಾಶಿ ಸುಂದರ ಮುಖಗಳ ಸೆರೆ ಹಿಡಿದ
ಕನ್ನಡಿಗೆ - ಯಾರೂ ದೃಷ್ಟಿ ತೆಗೆದಿಲ್ಲವೆಂದು!

*******************************************************

ಅಂದು, ಹೊಸ ಕನ್ನಡಿ ತಂದಿರಿಸಿದಾಗ
ಉದ್ದುದ್ದ ಕಾಣ್ಸೋ ಮುಖವನ್ ನೋಡಿ
ಬೇಸರ ಪಟ್ಕೊಂಡ ಹುಡುಗಿ
ಇಂದು, ಯಾಕಿಷ್ಟಗಲ ನನ್ ಮುಖ ಎಂದು
ಬೇರೆ ಕನ್ನಡಿಲಿ ಮುಖವನ್ ನೋಡಿ
ಬೇಸರಿಸುತಿರುವ ಬೆಡಗಿ

14 comments:

 1. ದಿವ್ಯ,
  ಕನ್ನಡಿಗೆ ಕನ್ನಡಿ ಹಿಡಿದಂತಿದೆ ಕವನಗಳು... ಕವಿಯತ್ರಿಯವರ ಲೇಖನಿ ಮಾತನಾಡಿದ್ದೆ ಖುಷಿ ನನಗೆ.

  ReplyDelete
 2. ದಿವ್ಯಾ ಅವರೆ..

  ತು೦ಬಾ ಸು೦ದರವಾಗಿದೆ ಕವನ...

  ಕೆಳಗಿನ ಸಾಲುಗಳು ಮುದನೀಡಿದವು...

  ಕಾರಣ ತಿಳಿಯಲಿಲ್ಲ ಯಾರಿಗೂ ಅಂದು
  ಲೇಡಿಸ್ ಹಾಸ್ಟೆಲಿನ ಆ ಕನ್ನಡಿ
  ಯಾಕೆ ಒಡೆದು ಹೋಯಿತೆಂದು...
  ಹಿಂದಿದ್ದ ಗೋಡೆಗೆ ಮಾತ್ರ ತಿಳಿದಿತ್ತು
  ರಾಶಿ ಸುಂದರ ಮುಖಗಳ ಸೆರೆ ಹಿಡಿದ
  ಕನ್ನಡಿಗೆ - ಯಾರೂ ದೃಷ್ಟಿ ತೆಗೆದಿಲ್ಲವೆಂದು!

  ReplyDelete
 3. ಎರಡನೇ ಪ್ಯಾರಾಕ್ಕೆ ಯಾವುದಕ್ಕೂ ನಿಂಬೆ ಕಟ್ಟಿಬಿಡಿ. ಎಲ್ಲರ ಕಣ್ಣಾಗುವ ಹಾಗಿದೆ.

  ಗಂಡಿನ ಕಣ್ಣಿಗಿಂತ ಹೆಣ್ಣಿಗೆ ಕನ್ನಡಿ ಮೇಲೇ ಜಾಸ್ತಿ ನಂಬುಗೆ. ಹಾಗಿರುವಾಗ ಶೀರ್ಷಿಕೆಯಲಿ vs ಪದ ಯಾಕೆ ಹಾಕಿದಿರೋ ಕಾಣೆ!

  ReplyDelete
 4. ರಾಜೇಶ್..
  ನಿಮ್ಮಂತಹ ಸಹೃದಯರ ಪ್ರೋತ್ಸಾಹವೇ ಮತ್ತೆ ಲೇಖನಿಯನ್ನು ಹಿಡಿಯುವಂತೆ ಪ್ರೇರೇಪಿಸುವುದು... ಪ್ರೀತಿಪೂರ್ವಕ ಧನ್ಯವಾದಗಳು :)

  ಸುಧೇಶ್,
  ಸಾಲುಗಳು ಮುದ ನೀಡುವಲ್ಲಿ ಸಫಲವಾದರೆ ಅವುಗಳ ಜನನ ಸಾರ್ಥಕವಾಯಿತು... ಮೆಚ್ಚುಗೆಗೆ ಧನ್ಯವಾದಗಳು :)

  ರಂಜಿತ್,
  ನಿಮ್ಮ ಕಾಳಜಿ ಪೂರ್ವಕ ಸಲಹೆಗೆ ಧನ್ಯವಾದಗಳು :)
  Vs ಪದ ಬಳಸಿದ್ದು ಹಾಗೆ ಸುಮ್ಮನೆ ! 'ಮತ್ತು' ಅಥವಾ '-' ಗಳನ್ನು ಬಳಸುವ ಬದಲಾಗಿ.. ಅದು ಓದುವವರಿಗೆ ಬೇರೇನೋ ಅರ್ಥ ಕೊಡುತ್ತಿದ್ದರೆ ನಾನು ಬದಲಾಯಿಸುವುದು ಒಳಿತೇನೋ...

  ReplyDelete
 5. ಹಾ ಹಾ,, ಚೆನ್ನಾಗಿ ಇದೆ ನಿಮ್ಮ ಕನ್ನಡಿಯ ಕವನ,,,, "ಕಾರಣ ತಿಳಿಯಲಿಲ್ಲ ಯಾರಿಗೂ ಅಂದು
  ಲೇಡಿಸ್ ಹಾಸ್ಟೆಲಿನ ಆ ಕನ್ನಡಿ
  ಯಾಕೆ ಒಡೆದು ಹೋಯಿತೆಂದು..." ಪಾಪ ಇನ್ನೇನ್ ಮಾಡುತ್ತೆ ಆ ಕನ್ನಡಿ ಹೇಳಿ, ಹಾಸ್ಟೆಲ್ ಹುಡುಗಿಯರು ಕಮ್ಮಿ ಕಾಟ ಕೊಡ್ತಾರ? :-)
  ಗುರು

  ReplyDelete
 6. ದಿವ್ಯಾ, ಕ್ಷಮಿಸಿ ಬಹಳ ದಿನಗಳಿಂದ ಬರಲಾಗಲಿಲ್ಲ ನಿಮ್ಮ ಗೂಡಿಗೆ...
  ಕನ್ನಡಿ..ನನಗದು ಕೊಡುವುದು ಮುನ್ನುಡಿ
  ಬರೆಯಬೇಕೆಂದಿರುವೆ ನನ್ನ ಬಗ್ಗೆ ನೋಡಿ ಬಿಡಲೇ ಕನ್ನಡಿ?
  ಹೀಗೆ ನನ್ನದೊಂದು ಕವನದ ಸಾಲುಗಳು...ನಿಮ್ಮ ಭಾವ ಇದಕೆ ಮೇಳೈಸುತ್ತೆ...
  ಚನ್ನಾಗಿವೆ ಚಿಕ್ಕ-ಚೊಕ್ಕ ಸಾಲುಗಳು..

  ReplyDelete
 7. ದಿವ್ಯಾ,
  ಮೊದಲ ಹನಿಗವನ ತುಂಬಾ ಇಷ್ಟವಾಯಿತು, ಎಷ್ಟು ಸತ್ಯ ಅಲ್ವ ಕನ್ನಡಿ ಮುಂದಿನ ಬದುಕು
  ಹನಿಗವನ ತುಂಬಾ ಚೆಂದವಾಗಿ ಬರಿತಿರ

  ReplyDelete
 8. ಕನ್ನಡಿ ತನ್ನ ಮುಖ ನೋಡ್ಕೋ ಬೇಕಂದ್ರೆ ಬೇರೆ ಕನ್ನಡಿಯಲ್ಲಿ ನೋಡಬೇಕು. ತರಲೆ ಅಲ್ವ ಈ ಕಮೆಂಟು? :-)

  ReplyDelete
 9. Dear Divya

  Impressive. like the lines very much

  :-)

  malathi S

  ReplyDelete
 10. ತುಂಬಾ ಚೆನ್ನಾಗಿದೆ, ವಿಶೇಷವಾಗಿ ಎರಡನೆಯ ಪದ್ಯ.
  ಕನ್ನಡಿ ಬಗ್ಗೆ ಅಸೂಯೆಯಾಗುತ್ತೆ. ರೂಪ ಮಾತ್ರ ನೋಡಿಕೊಂಡು ಯಾವಾಗಲೂ ಖುಷಿಯಾಗಿರುತ್ತೆ.

  ReplyDelete
 11. ಗುರು,
  ಹಾಸ್ಟೆಲ್ ಹುಡುಗಿಯರು ಕನ್ನಡಿಗೆ ಕಾಟ ಕೊಡುತ್ತಾರೇನು? ಅದು ಕನ್ನಡಿಯ ಸೌಭಾಗ್ಯ ಎನ್ನುವುದು ಹುಡುಗಿಯರ ಅಂಬೋಣ... ಬೇರೆ ಯಾರಿಗೆ ಅಂತಹ ಯೋಗ ಸಿಗುತ್ತೆ ಅಲ್ವಾ ? ;)
  ಪ್ರತಿಕ್ರಿಯೆಗೆ ಧನ್ಯವಾದ :)

  ಆಜಾದ್ ರವರೆ,
  ನಿಮಗೆ ಸಮಯ ಆದಾಗ ಬನ್ನಿ.. ಕ್ಷಮೆ ಏನೂ ಕೇಳಬೇಕಾಗಿಲ್ಲ.. ಪ್ರತಿಕ್ರಿಯೆಗೆ ಕೃತಜ್ಞತೆಗಳು...

  ಸುಶ್ರುತ,
  ಜೀವ ತಳೆದ ಸಾಲುಗಳು ಧನ್ಯವಾದವು :)

  ಗುರು,
  ನೀವಂದಿದ್ದು ನಿಜ.. ಕನ್ನಡಿ ಮುಂದಿನದು ಎಷ್ಟು ಸತ್ಯವೋ, ಕನ್ನಡಿಯೊಳಗಿನದು ಅಷ್ಟೇ ಮಿಥ್ಯ ! ಮೆಚ್ಚುಗೆಗೆ ಧನ್ಯವಾದಗಳು.. ಹೀಗೆ ಇರಲಿ ಪ್ರೋತ್ಸಾಹ..

  ಬಸವರಾಜ,
  ನೀವು ಈ ಪ್ರಶ್ನೆಯನ್ನು ಕನ್ನಡಿಯ ಬಳಿಯೇ ಕೇಳಿದರೆ ಚೆನ್ನ ;) ಪ್ರತಿಕ್ರಿಯೆಗೆ ಧನ್ಯವಾದ!

  ಮಾಲತಿಯವರೇ,
  ತುಂಬು ಹೃದಯದ ಧನ್ಯವಾದಗಳು :)

  ಕಲ್ಯಾಣ್,
  ಮೆಚ್ಚಿ ಪ್ರತಿಕ್ರಿಯಿಸಿದಕ್ಕೆ ಧನ್ಯವಾದ.. ಕನ್ನಡಿಯ ಬಗ್ಗೆ ಅಸೂಯೆ ಪಟ್ಟುಕೊಳ್ಳಬೇಡಿ.ಕನ್ನಡಿಗೆ ರೂಪ ನೋಡೋದಕ್ಕೆ ಮಾತ್ರ ಆಗೋದು....
  "ಇಷ್ಟು ಕಾಲ ಒಟ್ಟಿಗಿದ್ದು..." ಭಾವಗೀತೆಯ ಈ ಸಾಲುಗಳನ್ನು ಕೇಳಿದರೆ ಕನ್ನಡಿಯ ಬಗ್ಗೆ ಬೇಜಾರಾಗುತ್ತೆ..
  ---- ಸಾವಿರಾರು ಮುಖದ ಚೆಲುವ ಹಿಡಿದು ತೋರಿಯೂ....
  ಒಂದಾದರೂ ಉಳಿಯಿತೇನೆ ಕನ್ನಡಿಯ ಪಾಲಿಗೆ----
  ಅಲ್ವಾ?

  ReplyDelete
 12. ದಿವ್ಯ ಮೇಡಂ,
  ಕನ್ನಡಿಗೂ ಒಂದು ಅಂತರಂಗ ಇದೆಯೆಂದು ಬಹಿರಂಗ ಮಾಡಿದ ಕವಿತೆಗೆ ಧನ್ಯವಾದಗಳು.... ಸಿಂಪ್ಲಿ ಸೂಪರ್...

  ReplyDelete