
ತೀರದಲಿ ಕಾಯುತಿಹ ಕಾಲ್ಗಳನು ತೋಯಿಸದೆ,
ಆಸೆ ತೋರಿಸಿ ಹಿಂದಿಕ್ಕುವ ಅಲೆಗಳಂತೆ...
ಕಡ್ಡಿ ಗೀರುತಿರೆ ಒಮ್ಮೆಲೇ ಬೆಳಗಿ ಹೊಳೆದು,
ಮತ್ತೆ ಜ್ವಾಲೆಯಾಗದ ಅಗ್ನಿ ಶಿಖೆಯಂತೆ...
ಮುಷ್ಟಿಯಲಿ ಬಂಧಿಸಿ ಖುಶಿಪಡುತಲಿರಲು,
ಸದ್ದಿರದೆ ಜಾರಿ ರಿಕ್ತ ಹಸ್ತವನುಳಿಸುವ ಮರಳಿನಂತೆ...
ದಿನದೆಲ್ಲಾ ಕ್ಷಣವೂ ರವಿಯನ್ನು ಮುಚ್ಚಿಟ್ಟು,
ಒಂದಿನಿತು ಹನಿಸದೆ ಓಡುವ ಮೋಡದಂತೆ...
ಮನಕೆ ದಾಳಿ ಇಡುತಲಿವೆ ಪರಿ ಪರಿ
ಅಕ್ಷರಕ್ಕೆ ಇಳಿಸಲಾಗದ ಅದೆಷ್ಟೋ ಲಹರಿ !
ದಿವ್ಯಾ Madom...
ReplyDeleteಅದೆಷ್ಟೋ ಲಹರಿಗಳು ಹೀಗೆ ಅಕ್ಷರಕ್ಕೆ ಇಳಿಯಲ್ಲ ಅಂತ ತಮ್ಮ ಹಠ ಸಾಧಿಸಿಬಿಡುತ್ತವೆ..
ಆದರೆ ನೀವು ಅಕ್ಷರಕ್ಕೆ ಇಳಿಸಿದ ಈ ಲಹರಿಯಂತೂ ತುಂಬಾನೇ ಇಷ್ಟವಾಯ್ತು...
ದಿಲೀಪ್ ಹೆಗಡೆ
ಮನಸ್ಸಿನ ಲಹರಿಗಳನ್ನು ಅಕ್ಷರ ರೂಪದಲ್ಲಿ ಇಳಿಸಿ ಬಿಟ್ಟಿದ್ದೀರಲ್ಲಾ? ನಿಜವಾಗ್ಲೂ ಥ್ಯಾಂಕ್ಸ್
ReplyDeleteದಿವ್ಯ ಮೇಡಂ,
ReplyDeleteತುಂಬಾ ಚೆನ್ನಾಗಿದೆ,
ವಾಹ್....
ReplyDelete>> ಮನಕೆ ದಾಳಿ ಇಡುತಲಿವೆ ಪರಿ ಪರಿ
ReplyDeleteಅಕ್ಷರಕ್ಕೆ ಇಳಿಸಲಾಗದ ಅದೆಷ್ಟೋ ಲಹರಿ <<
ಇಲ್ಲಿ ಪರಿ ಅನ್ನುವ ಶಬ್ದ ಏಕಾಂಗಿಯಾಗಿ ಓದಲು ಕೊಂಚ ಅಭಾಸವಾಗ್ತಿದೆ. "ಪರಿಯಾಗಿ" ಆಗಬೇಕಿತ್ತಾ ಅದು?
ಹೇಗೂ ರಾಗಕ್ಕಾಗಿ ಬರೆದದ್ದಲ್ಲವಾದ್ದರಿಂದ
>>ಮನಕೆ ದಾಳಿ ಇಡುತಲಿವೆ ಪರಿ ಪರಿ
ಯಾಗಿ ಅಕ್ಷರಕ್ಕೆ ಇಳಿಸಲಾಗದ ಅದೆಷ್ಟೋ ಲಹರಿ <<
ಈ ರೀತಿಯಾಗ್ಯೂ ಮಾಡಬಹುದಿತ್ತಲ್ಲವಾ?
ಅದು ತಪ್ಪಂತ ನಾ ಅಂತಿಲ್ಲ. ಒಂದು ರೀತಿಯಲ್ಲಿ ನೀವು ಬರೆದದ್ದು ಸರಿ ಕೂಡ ಹೌದು. ಅದು ಕವಯತ್ರಿಯಾಗಿ ತೆಗೆದುಕೊಳ್ಳಬಹುದಾದ ಸ್ವಾತಂತ್ರ್ಯ.
ಹಿಂದಿನ ಪ್ರಸಿದ್ಧ ಗೀತರಚನೆಕಾರ ಪ್ರಸೂನ್ ಜೋಶಿ "ರಂಗ್ ದೇ ಬಸಂತಿ" ಚಿತ್ರದಲ್ಲಿ "ರೂಬರೂ... ರೋಶನಿ" ಅಂತಲೇ ಪಲ್ಲವಿ ಬರೀತಾರೆ. ನಿಜವಾಗಿಯಾದರೆ "ಮೈ ರೂಬರೂ ಹೂಂ, ರೋಶನೀ ಕಿ.." ಅಂತಾಗಬೇಕು. ಆದರೆ ಕೇಳುವಾಗ, ಅರ್ಥೈಸುವಾಗ ತಪ್ಪೆಂದು ಚೂರೂ ಅನ್ನಿಸುವುದಿಲ್ಲ. ಅದೇ ಕವಿತೆಯ ಪ್ಲಸ್ ಪಾಯಿಂಟ್. ಜೋಶಿಯವರೇ ಅಂದಂತೆ, ಗದ್ಯದಲ್ಲಿ ಒಂದು ವೃತ್ತ ಸೂಚಿಸಲು, ವೃತ್ತ ಪೂರ್ಣ ಬರೆಯಬೇಕಾಗುತ್ತದೆ, ಕವಿತೆಯಲ್ಲಿ ಒಂದು ಚುಕ್ಕಿಯಿಟ್ಟರೂ ಸರಿ, ಓದುಗರ ಮನದಲ್ಲಿ ಚುಕ್ಕಿಯ ಪಕ್ಕ ಚುಕ್ಕಿ ಸೇರಿ ವೃತ್ತವಾಗುತ್ತದೆ.
ಇಲ್ಲೂ ನಿಮ್ಮ ಪರಿ ಪರಿ ಯ ಪಕ್ಕ ಆಗಿ ಅನ್ನೋದು ಮನಸ್ಸಲ್ಲೇ ಸೇರಿಕೊಳ್ಳುತ್ತೆ.
ಆದರೆ ರಾಗವಾಗಿ ಹಾಡಬೇಕಾದ ಅವಶ್ಯಕತೆ ಇಲ್ಲದಾಗ ಪರಿಯಾಗಿ ಅನ್ನುವುದನ್ನು ಸೇರಿಸಬಹುದಿತ್ತು ಅಂದೆನಷ್ಟೇ.
ಯಾಕೋ ನನ್ನ ಕಾಮೆಂಟು ನಿಮ್ಮ ಕವಿತೆಗಿಂತ ದೊಡ್ಡದಾಯಿತು..:)
ಕವನದ ಬಗ್ಗೆ ಹೇಗೆ ಕಮೆ೦ಟು ಮಾಡುವುದು ಎ೦ದು ತಿಳಿಯುವುದಿಲ್ಲ ನನಗೆ... ಓದಿದಾಗ ಚೆನ್ನಾಗಿದೆ ಅನಿಸುತ್ತಿದೆ ಮನಸಿಗೆ... ಹಾಗೆ ಈ ಕವನ ಕೂಡ :)
ReplyDeleteಆಹ್...ತುಂಬಾ ಚೆನ್ನಾಗಿ ಬರೆದಿದ್ದೀರಿ. ಎಲ್ಲಾ ಉಪಮೆಗಳು perfect ಆಗಿದೆ. ಈ ಉಪಮೆಗಳಿಲ್ಲದೆ ಈ ಭಾವಕ್ಕೆ ಜೀವ ಕೊಡಲು ಸಾಧ್ಯವಿಲ್ಲ ಅನ್ಸತ್ತೆ. ಹಾಗೆಯೆ, ಇದನ್ನು ಪದ್ಯ ಅಲ್ದೆ ಬೇರೆ ಹೇಗೂ ಹೇಳಕ್ಕೆ ಆಗಲ್ಲ.
ReplyDeleteದಿವ್ಯ ಮೇಡಂ,
ReplyDeleteತುಂಬಾ ಚೆನ್ನಾಗಿದೆ, ಅರ್ಥವೂ ಚೆನ್ನಾಗಿದೆ....
ಕವನ ಚೆನ್ನಾಗಿದೆ
ReplyDeletewah olleya kavana:):)
ReplyDeleteಮೆಚ್ಚಿ ಪ್ರತಿಕ್ರಿಯಿಸಿದ ಎಲ್ಲರಿಗೂ ನನ್ನ ಧನ್ಯವಾದಗಳು :)
ReplyDelete@ಚಕೋರ : ಕವಿಯತ್ರಿಯಾಗಿ ಆ ಸ್ವಾತಂತ್ರ್ಯ ನಾ ತಗೊಂಡೆ :)