
ಪುಟ್ಟ ಜೀವವೊಂದು ಸಾಗುತಿದೆ ಬೇಸರದಿ
ತನ್ನ ಒಲವ ಗೂಡಿನಿಂದ ದೂರ ದೂರಕ್ಕೆ
ಅರಿವಿಲ್ಲದೆ ಜಾರಿದ್ದವು ಕಣ್ಣಿಂದ ಹನಿಗಳು
ಪ್ರತಿ ಹನಿಯಲೂ ಕಾಣುತಿತ್ತು
ಕಳೆದ ಕ್ಷಣಗಳ ಮಧುರ ನೆನಹುಗಳ
ಅಚ್ಚಳಿಯದ ಪ್ರತಿಬಿಂಬ
ಹರಿಯುತಿತ್ತು ಹನಿ ಸಾಲು ಒಂದಿನಿತು ನಿಲ್ಲದೆ
ಕಣ್ಮರೆಯಾಗುವ ಆ ಬಿಂಬವನ್ನು ನೆನೆಯುತ್ತಾ
ಸಿಹಿಯಾಗಿತ್ತು ಜಾರಿದ ಆ ಕಣ್ಣೀರ ಹನಿ ಬಿಂದು
ಜೇನುಗೂಡಿನಲಿ ಕಳೆದ ಸವಿಗೆ ಕುರುಹಾಗಿತ್ತು
ಚಿತ್ರಕ್ಕೆ ಹೊಂದಿಗೆಯಾಗೋ ಕವನ ..ಚೆನ್ನಾಗ್ ಬರೆದಿದ್ದೀಯಾ ತಂಗಮ್ಮಾ. ನನ್ನ ಮೇಲಿನ ಮುನಿಸಲ್ಲಿ ಇನ್ನೊಂದು ಬರೆ...ಆವಾಗ ಇ ನ್ನೂ ಚೆನ್ನಾಗ್ ಇರುತ್ತೆ ನಿನ್ನ ಕವನ
ReplyDelete-ಧರಿತ್ರಿ
Nice one..tuba chennagide...
ReplyDeleteಚೆನ್ನಾಗಿದೆ
ReplyDeleteಧರಿತ್ರಿ, ಸಂತೋಷ್, ಕಲ್ಯಾಣ್.... ಕವನ ಮೆಚ್ಚಿದ್ದಕ್ಕೆ ಧನ್ಯವಾದಗಳು
ReplyDelete-ಪ್ರೀತಿಯಿಂದ,
ದಿವ್ಯಾ
ಕವನ ತುಂಬಾ ಚೆನ್ನಾಗಿದೆ. ಎಲ್ಲೋ ನಮ್ಮ ಭಾವನೆಗಳೊಂದಿಗೆ ತಾಕಲಾಡುತ್ತಿವೆಯೇನೋ ಅನ್ನಿಸುತ್ತದೆ...
ReplyDeleteಗೋಪಾಲ್ ಸೋಮಯ್ಯ
ನಿಮ್ಮ ಮೆಚ್ಚುಗೆಗೆ, ಅನಿಸಿಕೆಗೆ ಧನ್ಯವಾದಗಳು ಗೋಪಾಲ್
ReplyDelete- ದಿವ್ಯಾ.
naanu oadutta banda nimma ella kavnagaloo chendagive.heege barta irali. biduvaadaga nimma blog ge bheti koduttiruttene.:)
ReplyDelete