
ಚಂದಮಾಮ ಇಣುಕುತಿಹನು
ಕುಡಿ ನೋಟ ಬೀರಿ ನಗುತಲಿಹನು
ಜೀವನದುದ್ದದ ಜೊತೆಗಾರ
ಸದಾ ಖುಷಿ ಕೊಟ್ಟ ಗೆಣೆಕಾರ
ಪುಟ್ಟ ಕಂದನಾಗಿದ್ದಾಗ, ನೋಡುತಿದ್ದೆ
ಯಾರೂ ದೂರವಾದರೂ ನೀ ಜೊತೆಗೆ ಇದ್ದೆ
ದಿನವಿಡೀ ದಣಿದಾಗ, ನೀ ಎದುರು ಬರುವೆ
ಮಧುರ ಸಿಂಚನವ ಎರೆದು ಪುಳಕಿಸುವೆ
ಕುಗ್ಗುತಾ ಕಾಣೆಯಾದರೂ ಒಂದೊಮ್ಮೆ
ಹಿಗ್ಗುತಾ ನಗಿಸುವೆ ಮಗದೊಮ್ಮೆ
ಮರೆತು ಮರೆಯಾಗುವ ಉಳಿದವರಂತಲ್ಲ
ನೀ ಸದಾ ಜೊತೆಗಿರುವ ಪ್ರೀತಿಯ ನಲ್ಲ
ಎದುರಿಗಿಲ್ಲದಿರೂ ಆ ಒಂದು ದಿನ
ನೀಡುವೆ ಖುಷಿಯನು ಉಳಿದೆಲ್ಲ ದಿನ
ಮರೆಯಾಗುವ ಮೊದಲೇ ತಿಳಿಸುವೆ ಸ್ಪಷ್ಟ
ಅದಕಾಗೇ ಆಗುವೆ ನನಗೆ ನೀನಿಷ್ಟ
ಯಾರಿಹರು ಜಗದಿ ಪ್ರತಿಶತ ಪೂರ್ಣ
ಸಕಲರಿಗೂ ಅಸಾಧ್ಯ ಆಗಲು ಪರಿಪೂರ್ಣ
ಶ್ಯಾಮಲ ಕಳಂಕಗಳಿದ್ದರೇನಂತೆ
ಶುಭ್ರವಾಗಿರುವೆ ನಿನ್ನ ಬಿಳಿ ಬಣ್ಣದಂತೆ
ಇರುವುದೆಲ್ಲವನು ಇರುವಂತೆ ತೋರುವ
ಬೇಸತ್ತ ಹೃದಯಕೆ ಆಹ್ಲಾದ ನೀಡುವ
ಮೈ ಮನಗಳಿಗೆಲ್ಲ ತಂಪನೆರೆಯುವ
ನಿನ್ನಂತೆ ಸದಾ, ಜೊತೆಗಿರುವ ಜೊತೆಗಾರ
ಹುಡುಕಿಕೊಡುವೆಯಾ ನನಗೆ ಓ ಚಂದಿರ ?
ದಿವ್ಯ,
ReplyDeleteಕವನದ ಸಾಲುಗಳಲ್ಲಿ ಗಾಂಭೀರ್ಯ ಕೊಂಚ ಜಾಸ್ತಿಯಾಯ್ತೇನೋ ಅನ್ನಿಸ್ತು. ಅದನ್ನು ಹೊರತು ಪಡಿಸಿದರೆ ಕವನದ ಎಳೆ, ಮತ್ತು ಬೆಳವಣಿಗೆ ಎರಡು ಕವನವನ್ನು ಓದಿಸಿಕೊಂಡು ಹೋಗುತ್ತದೆ.
ಕವನ ತುಂಬಾ ಚನ್ನಾಗಿದೆ.
ReplyDeletechennagide, mana muttuva kavana, keep it up...nanna blog kooda nodi...http://ravirajgalagali.blogspot.com
ReplyDeleteದಿವ್ಯಾ...
ReplyDeleteಕವನ ಸೊಗಸಾಗಿದೆ. ಗಂಭೀರವಾಗಿದ್ದರೂ ಇಷ್ಟವಾಗುತ್ತದೆ...
ರಾಜೇಶ್, ಶಿವಪ್ರಕಾಶ್, ಬಾಗಲಕೋಟ, ಶಿವು... ನಿಮ್ಮೆಲ್ಲರಿಗೂ, ತುಂಬು ಹೃದಯದ ಧನ್ಯವಾದಗಳು.
ReplyDeleteನಾನಂತೂ ಎಂದಿನಂತೆ, ಭಾವನೆಗಳು ಮನಸಿಗೆ ಬಂದಂತೆ, ಕವನ ರೂಪ ಕೊಟ್ಟಿದ್ದೇನೆ.. ಬಹುಷಃ ಕವನದ ವಸ್ತುವಿನಿಂದಾಗಿ, ಗಾಂಭೀರ್ಯ ಜಾಸ್ತಿ ಎಂದೆನಿಸಿರಬಹುದೇನೋ...
ದಿವ್ಯಾ ಗುಡ್...ಚೆಂದದ ಕವನ. ಮನಸ್ಸಿಗೆ ಏನು ಅನಿಸಿತ್ತೋ ಅದನ್ನು ನೇರವಾಗಿ ಅಕ್ಷರಕ್ಕಿಳಿಸಿದ್ದಿರಿ. ಕವನ ಎಲ್ಲಾ ಬರೆಯಾಕೆ ಬರಲ್ಲಮ್ಮ..ೋದ್ತೀನಿ..ಇನ್ನಷ್ಟು ಪ್ರಬುದ್ಧ, ನಮ್ಮನೆಲ್ಲಾ ಒಂದೇ ನೋಟಕ್ಕೆ ಸೆಳೆದುಬಿಡುವ ಕವನ ಬರೆಯಿರಿ..ಶುಭವಾಗಲೀ ಗೆಳತೀ.
ReplyDelete-ಧರಿತ್ರಿ
ಧರಿತ್ರಿ,
ReplyDeleteನಿಮ್ಮ ಪ್ರೀತಿ ತುಂಬಿದ ಪ್ರೋತ್ಸಾಹಕ್ಕೆ ನಾನು ಧನ್ಯ..
-ದಿವ್ಯಾ