Friday, February 27, 2009

ಮಾಯದಾಟ

ಉದಯ ರವಿಯೊಡನೆ ಸಕಲವೂ ಗೋಚರ
ಆರಂಭವಾಗುವುದು ಮುಂಜಾನೆ ಸಂಚಾರ
ಪುಟ್ಟ ಮಗುವೊಂದು ಮನಸ ತಟ್ಟುವುದು ತೀರಾ

ಆ ನೋಟಕಾಗುವುದು ಹೃದಯವು ಭಾರ


ಓಡಾಡುವ ಜನರೆಷ್ಟೋ ಆ ಪಾರ್ಕಿನೊಳಗೆ

ಇದರ ಪರಿವೆಯಿಲ್ಲ ಆ ಮಗುವಿನೊಳಗೆ
ಅಲ್ಲೇ ಅದರಾಟ, ಪುಟ್ಟ ಗುಡಿಸಲಿನ ಹೊರಗೆ
ಕಿತ್ತ ಬಾಟಲಿಯ ಸೂತ್ರವಿದೆ, ಅವನ ಕೈಯೊಳಗೆ
ಅವನ ಲೋಕಕೆ, ಅವನೇ ರಾಜ ಆ ಮರದ ಕೆಳಗೆ
ಮೇಲೆ ಹಾರಲು ಬಾಟಲಿ, ಕೆಳಗೆ ಸಂತಸದ ಬುಗ್ಗೆ

ಅಷ್ಟರಲಿ ಕರೆಯುವನು, ಅಲ್ಲಿರುವ ತಂದೆ
ಬಿಟ್ಟು ಬರುವನು ಹುಡುಗ, ಓಡೋಡಿ ಮುಂದೆ
ಓಡಿಸಲು, ಕಿತ್ತಾಡುವ ನಾಯಿಯ ಮಂದೆ

ಇದೇ ಅವರ ದಿನ ನಿತ್ಯದ ಧಂದೆ

ಸ್ಥಾಪಿಸಲು ಪಾರ್ಕಿನೊಳು ಶಾಂತಿಯ ಸುಧೆ


ಅತ್ತ ಬಾನಂಗಳದಲಿ ಏರೋ ಇಂಡಿಯಾ ಹಾರಾಟ
ಶ್ರೀಮಂತ ಮಕ್ಕಳ ಸಂತಸದ ಕೂಗಾಟ
ತಿಂಡಿ ತೀರ್ಥಗಳು, ಮಿಕ್ಕಿ, ಚೆಲ್ಲಾಟ

ಇತ್ತ ಕೂಳು ಅನ್ನಕಾಗಿ ಪರದಾಟ

ಮತ್ತೆ ಸಾಗುವುದು ಕಿತ್ತ ಬಾಟಲಿಯ ಆಟ

ನೋಡುಗರ ಮನದಲ್ಲಿ ಏನೂ ಮಾಡಲಾಗದ ಚಟಪಟ...

ಯಾರು ಬಲ್ಲರು ಆ ದೇವರ ಮಾಯದಾಟ ?
ಸೂತ್ರ ಅವನ ಕೈಯಲ್ಲಿ, ನಾವು ಬರಿಯ ಪಟ !!

1 comment:

  1. ರೀ ನನಗೆ ಒ೦ದು ಸ್ವಲ್ಪ inspire ಮಾಡಿ ನಾನು ಬರೆಯಲಿಕ್ಕೆ ಪ್ರಯತ್ನ ಪಡ್ತಿನಿ.
    ತು೦ಬಾ ಚೆನ್ನಾಗಿದೆ ಇದು ಕೂಡಾ

    ReplyDelete