Sunday, December 26, 2010

ಇಲ್ಲ !!

ಮಂಜು ಕವಿದಿದೆ ಎಲ್ಲೆಡೆ
ದಾರಿ ತಿಳಿಯುತಿಲ್ಲ
ಭಾವ ಜೀವ ತಳೆಯುತಿಲ್ಲ

ವಸಂತವಿನ್ನೂ ದೂರವಿದೆ
ಹಸಿರ ಚಿಗುರು ಕಾಣುತಿಲ್ಲ
ಕೋಗಿಲೆ ಹಾಡುತಿಲ್ಲ

ತಂಪನೆ ಚಳಿ ಕೊರೆಯುತಿದೆ
ಇನಿಯ ಸನಿಹದಲಿಲ್ಲ
ರಸಿಕತೆಯ ಸುಳಿವಿಲ್ಲ

ಹಾಸಿ ಹೊದೆವಷ್ಟು ರಾಶಿ ಕೆಲಸ
ಭಾವನೆಗೆ ಸಮಯವಿಲ್ಲ
ಹಾಡಿಗೆ ಕೊನೆಯಿಲ್ಲ !

4 comments:

  1. ತಂಪನೆ ಚಳಿ ಕೊರೆಯುತಿದೆ
    ಇನಿಯ ಸನಿಹದಲಿಲ್ಲ
    ರಸಿಕತೆಯ ಸುಳಿವಿಲ್ಲ
    ........

    ಏನು ತಂಗಮ್ಮಾ...ತುಂಬಾ ಚಳಿನಾ..ಪಾಪಾ....................ಹೆಹಹೆಹ!
    -ಚಿತ್ರಾ

    ReplyDelete