Friday, October 1, 2010

ಯಾಕಿದು ಹೀಗಾಯ್ತು?














ಯಾಕಿದು ಹೀಗಾಯ್ತು?
ಮೈಯ ಶಕ್ತಿಯೆಲ್ಲ ಯಾರೋ ಕಿತ್ತೊಯ್ದಂತೆ
ಒಳಗಿನ ಚಿಲುಮೆಯೆಲ್ಲ ಬತ್ತಿ ಹೋದಂತೆ
ಬದುಕಿನ ಬಗ್ಗೆ ಭಯ ಹುಟ್ಟಿದಂತೆ
ಸಮಯ ಸಾಗದೆ ನಿಂತಂತೆ
ಕನಸಿನಲ್ಲಿ ಸಾವಿನ ಕದವ ಕಂಡಂತೆ

ಯಾಕಿದು ಹೀಗಾಯ್ತು?
ಮೊನ್ನೆ ಲಾಂಗ್ ಲೀವ್ ಎಂದು ಖುಷಿಯಿಂದ
ನಾ ಬೀಗುತಿರೆ - ಯಾರದ್ದೋ ದೃಷ್ಟಿ ತಾಕಿತಾ?
ಅಥವಾ ಅಂದು ತಲೆ ಮೇಲೆ ಕಾಗೆ ಹಾರಿದ್ದು
ಅದರ ಬಗ್ಗೆ ಗೂಗಲ್ಲು ಮಾಡಿ ಓದಿದ್ದು
ಆ ಶಕುನ ಶಾಸ್ತ್ರ ನಿಜವಾಗುತ್ತಿದೆಯಾ?

ಯಾಕಿದು ಹೀಗಾಯ್ತು?
ನಾನೊಬ್ಬಳೆ ಸಾಗುತಿರೆ ಆ ಕದದತ್ತ
ಎಲ್ಲೆಡೆಯಿಂದ ಅಮ್ಮ ಅಪ್ಪ ಮತ್ತೆಲ್ಲರೂ
ನನ್ನ ಹಿಂದೆ ಹಿಂದಕೆ ಎಳೆಯುತ್ತಿದ್ದರೂ
ಇಚ್ಛೆಯಿಲ್ಲದ ಪ್ರಚ್ಚನ್ನ ಶಕ್ತಿಯೊಂದು
ಸೆಳೆಯುತ್ತಿತ್ತೆ ನನ್ನನ್ನು ಮುಂದು?

ಯಾಕಿದು ಹೀಗಾಯ್ತು
ಎಂದು ನಾ ಹೆಜ್ಜೆಯಿಡುತಾ ಹೋಗಲು
ಸಾಗುತ್ತಾ ಆ ಗುರಿಯ ಬಳಿ ತಲುಪಲು
ತೆರೆದಂತಿದ್ದ
ಕದ ಪೂರ್ತಿ ಮುಚ್ಚಿ ಹೋಗಲು
ಅದೆಷ್ಟು ಹುಡುಕಿದರೂ ಕದ ಕಾಣದಿರಲು


ನಿದ್ದೆಯಿಂದ ನಾ ಎದ್ದು ಕೂತಿದ್ದೆ
ಸಂಪೂರ್ಣವಾಗಿ ಬೆವತು ಹೋಗಿದ್ದೆ
ಆ ದಿನದಿಂದ ನಾ ಚೇತರಿಸುತಿದ್ದೆ
!!

5 comments:

  1. ಯಾಕಿದು ಹೀಗಾಯ್ತು...
    ಬೇಗ ಚೇತರಿಸಿಕೊಂಡು ವಾಪಸ್ ಬನ್ರಿ
    ಇಷ್ಟು ದಿನ ನಂಗೆ ತುಂಬಾ ಬೋರಾಯ್ತು :P

    ReplyDelete
  2. yaake?? why?? kyon?? kashaalaa? purquoi?
    :-)
    come soon

    ms

    ReplyDelete
  3. ಯಾಕೆ ಹೀಗಾಯ್ತು?
    ಬೇಗ ಹುಷಾರಾಗಿ ಬನ್ನಿ...

    ReplyDelete