Thursday, December 10, 2009

ಮೌನ ರೋದನ

-- ಒಂದು ನೊಂದ ಹೃದಯದ ಮೂಕ ವೇದನೆ !










ಕಣ್ಣು ಮುಚ್ಚುತಿವೆ ಗೆಳೆಯಾ...
ನಿನ್ನ ಹುಡುಕಿದ ಕಣ್ಣುಗಳು ಮುಚ್ಚುತಿವೆ
ನಿನ್ನ ಬಯಸಿದ ಕಣ್ಣುಗಳು ಮುಚ್ಚುತಿವೆ
ಮುಷ್ಕರ ಹೂಡುತಾ ಹುಡುಕಾಟ ನಿಲ್ಲಿಸಿವೆ !

ನೀನಿರುವ ಬೀದಿಯಲಿ ಓಡಾಡುತಿರಲು
ನೀ ಬರುವ ಸಮಯದಲಿ ನಾನೂ ಹೊರಡಲು,
ನೀ ನಡೆವ ಹಾದಿಯಲಿ ನಾ ಚಲಿಸುತಿರಲು
ಹುಡುಕಿತ್ತು ಕಂಗಳು ಸದಾ ನಿನ್ನನ್ನು
ಜೊತೆಗೆ ಜೊತೆ ಸೇರುವ ನಿನ್ನ ಕಣ್ಣೋಟವನು

ಸಾವಿರ ಜನಗಳು ಸೇರಿದ್ದ ಮೇಳದಲಿ
ನಿನ್ನ ಜೊತೆ ಸೇರಿ ನಾ ನಡೆದ ಕ್ಷಣದಲ್ಲಿ
ನನ್ನೆದೆಗೆ ನಿನ್ನುಸಿರು ತಾಕಿದ ಘಳಿಗೆಯಲಿ
ಮನಸು ಬಯಸಿತ್ತು ಸದಾ ಸನಿಹವನು
ಪ್ರೀತಿ ಅಭಯ ನೀಡುವ ನಿನ್ನ ಕಂಗಳನು

ಲೋಕವನು ಕಣ್ತೆರೆದು ನೋಡುವ ಹೊತ್ತಿಗೆ
ನೀನೇ ಗೋಚರಿಸಿದ್ದು ನನ್ನ ಕಣ್ಣಿಗೆ
ಪಂಚಾಮೃತವಾದೆ ನೀ ನನ್ನ ಪಾಲಿಗೆ
ವಾಸ್ತವ-ಸಾಧ್ಯ ಕನಸನ್ನು ಕಂಡೆ
ಕನಸು ನನಸಾಗದಿರೆ? - ಎಂದು ಮರುಗುತಾ ನೊಂದೆ

ಇನ್ನೆಲ್ಲವೂ ಬರೀ ವಿಧಿಯಾಟ ಗೆಳೆಯಾ
ಕಣ್ಣು ಮುಚ್ಚುವ ಮುನ್ನ ನೀನೆದುರು ಬರುವೆಯಾ?
ಇಲ್ಲದಿರೆ ಮುಚ್ಚಿ ಹೋಗುತವೆ ಈ ಕಂಗಳು
ಮರೆಯಲಿಚ್ಚಿಸದ ನಿನ್ನನ್ನು ಮರೆಯಲು
ಮತ್ತೊಂದು ಹೊಸ ಕನಸ ಕಾಣಲು

ಕಣ್ಣು ಮುಚ್ಚುತಿವೆ ಗೆಳೆಯಾ...
ನಿನ್ನ ಹುಡುಕಿದ ಕಣ್ಣುಗಳು ಮುಚ್ಚುತಿವೆ
ನಿನ್ನ ಬಯಸಿದ ಕಣ್ಣುಗಳು ಮುಚ್ಚುತಿವೆ
ಮುಷ್ಕರ ಹೂಡುತಾ ಹುಡುಕಾಟ ನಿಲ್ಲಿಸಿವೆ !

7 comments:

  1. ದಿವ್ಯ,
    ವಾವ್ ,, ತುಂಬ ಚೆನ್ನಾಗಿದೆ ಗೆಳೆಯನ ಬಗ್ಗೆ ಕವನ.....ಮೌನ ರೋಧನ....
    ಗುರು

    ReplyDelete
  2. ದಿವ್ಯಾ
    ನಿಮ್ಮ ತೊಳಲಾಟ ನಮಗೆ ಅರ್ಥವಾಗುತ್ತದೆ
    ಯಾವಾಗ ಸಿಹಿ ಸುದ್ದಿ ತಿಳಿಸುತ್ತಿರಿ
    ಒಳ್ಳೆಯ ಕವನ

    ReplyDelete
  3. Divya,
    Aa Hudga yaru antha hel bidu sumne..:P
    ee tara rodne arogyakke olledalla kane..;)

    ReplyDelete
  4. ಚೆನ್ನಾಗಿದೆ. ಖಳನಾಯಕ ವಿಧಿಗೆ ಧಿಕ್ಕಾರ.

    ReplyDelete
  5. "ಒಂದು ನೊಂದ ಹೃದಯದ ಮೂಕ ವೇದನೆ" ಉಪ ಶೀರ್ಷಿಕೆಯ ಉದ್ದೇಶವನ್ನು ಓದುಗರು ಗಮನಿಸಬೇಕಾಗಿ ವಿನಂತಿ. ಯಾವುದೋ ಸಂದರ್ಭದಲ್ಲಿ ಏನೋ ಲಹರಿಯಲ್ಲಿ ಕವನಗಳು ಜನಿಸುತ್ತವೆ. ಹಾಗೆಂದ ಮಾತ್ರಕ್ಕೆ ಕವನಗಳು ಹಾಗೂ ಕವಿ/ಕವಯತ್ರಿಯ ವೈಯಕ್ತಿಕ ಜೀವನಕ್ಕೆ ಸಂಬಂಧ ಕಲ್ಪಿಸುವುದು ಸರಿಯಲ್ಲ.

    ReplyDelete
  6. ದಿವ್ಯಾ
    ಗೆಳೆಯನ ಬಗೆ ತೊಳಲಾಟದ ಕವನ ಸೊಗಸಾಗಿದೆ....
    ಚೆಂದದ ಬರಹ....

    ReplyDelete