-"ಬಾ.. ನೋಡು ಗೆಳತಿ... ನವಿಲುಗರಿಯು ಮರಿ ಹಾಕಿದೆ..." ಈ ಹಾಡಿನ ಸ್ಫೂರ್ತಿಯಿಂದ ಬರೆದ ಸಾಲುಗಳಿವು ! ಇತ್ತೀಚಿನ ಕೆಲವು ದಿನಗಳಲ್ಲಿ ಮನಸ್ಸಿಗೆ ತುಂಬಾ ಖುಷಿ ಕೊಟ್ಟ ಹಾಡಿದು... ಈ ಹಾಡನ್ನು ಕೇಳಿದ ಬಾಲ್ಯದ ಗೆಳತಿ, ಅದೇ ಹಾಡಿನ ಧಾಟಿಯಲ್ಲಿ, ಗೆಳೆಯನಿಗೆ ಹೇಗೆ ಪ್ರತಿಕ್ರಿಯಿಸಬಹುದು ? - ಎನ್ನುವುದನ್ನು ಕಲ್ಪಿಸಿದಾಗ ಜೀವ ತಳೆದ ಸಾಲುಗಳು...
ಬಾ ನೋಡು ಗೆಳೆಯಾ..ನನ್ನ ಮನವು ಅರಳಿ ನಿಂತಿದೆ...
ಕಣ್ಣ ರೆಪ್ಪೆ ಮುಚ್ಚದೆ.. ಬರುವ..ನಿನ್ನನೇ ನೆನೆಯುತಾ...
ನಾ..ಕಾದು ಕುಳಿತಿರುವೆ..ನಿನ್ನಾ ದಾರಿಯ ನೋಡುತಾ...
ಮರದ ತುಂಬಾ ಬೋರೆ ಹಣ್ಣು..ಮತ್ತೆ ಮಾಗಿ ಕೂತಿವೆ...
ನನ್ನ ನಿನ್ನ ಭೇಟಿಗಾಗಿ..ಮರದ ನೆರಳು ಕಾಯುತಿದೆ...
ಪಾರಿಜಾತ ಹೂವ ಹಾರ..ಮುಡಿಯನೇರಲು ತವಕಿಸಿದೆ...
ಬಾ...ಹನಿವ ಮಳೆಯಲಿ..ಹೊಳೆಯ ತಟದಲಿ..ಜೊತೆ ಸಾಗುವಾ...
ನಾನು ನೀನು ಸೇರಿಕೊಂಡು..ಕನಸ ತೇರನೆಳೆಯೋಣಾ...
ಊರ ಜಾತ್ರೆಯಲ್ಲಿ ನಾವು..ಕೈಯ ಹಿಡಿದು ನಲಿಯೋಣಾ..
ನಾನು ಬೇಕು ಅಂದ ಹೂವು...ಈಗಲಾದರೂ ಕೊಡು ಹುಡುಗಾ...
ಈ...ಗೆಳತಿ ಮನಕೂ..ನಿನ್ನ ಬಯಕೆ ಅತಿಯಾಗಿದೆ...
ಗೀಜಗದ ಸೋಜಿಗ...
5 months ago
ದಿವ್ಯ,
ReplyDeleteಒಳ್ಳೆಯ ಪದ ಸಂಯೋಜನೆ. ಪರಿ ಪಕ್ವ ಉತ್ತರ. ಅದರಲ್ಲೂ "ನೋಡು ಗೆಳತಿ ನವಿಲು ಗರಿಯು" ಹಾಡಿನ ಟ್ರ್ಯಾಕ್ ಸಂಗೀತದೊಡನೆ ನಿಮ್ಮ ಸಾಲುಗಳನ್ನು ಗುನುಗಿಕೊಂಡರೆ ಅದು ಕೊಡುವ ಮಜವೇ ಬೇರೆ. ಮಧುರ ಸಾಲುಗಳು. ಗೆಳೆಯ ಪಾರಿಜಾತದ ಹಾರ ಹಿಡಿದು ಓಡೋಡಿ ಬರುವುದರಲ್ಲಿ ಸಂಶಯವೇ ಇಲ್ಲ.
ದಿವ್ಯಾ,
ReplyDelete''ನಾನು ನೀನು ಸೇರಿಕೊಂಡು..ಕನಸ ತೇರನೆಳೆಯೋಣಾ...
ಊರ ಜಾತ್ರೆಯಲ್ಲಿ ನಾವು..ಕೈಯ ಹಿಡಿದು ನಲಿಯೋಣಾ..
ನಾನು ಬೇಕು ಅಂದ ಹೂವು...ಈಗಲಾದರೂ ಕೊಡು ಹುಡುಗಾ...''
ಸಾಲುಗಳು ತುಂಬಾ ಹಿಡಿಸಿತು
ಒಳ್ಳೆಯ ಕವಿತೆ
ಚೆನ್ನಾಗಿದೆ, ಹೊಸಾ ಪ್ರಯೋಗ.
ReplyDeleteಆದರೆ ಇನ್ನೊಂಚೂರು ಕ್ರಿಯೇಟಿವ್ ಆಗಬಹುದಿತ್ತೇನೋ ಅನ್ನಿಸಿತು. ಅಲ್ಲಿನ ಪ್ರಶ್ನೆಗೆ ಹಾಗೇ ಉತ್ತರ ನೀಡುವ ಬದಲು ಬೇರೆ ಭಾವ ಬರೆಯಬಹುದಿತ್ತೇನೋ ಮತ್ತೆ ಒಂದೆರಡು ಕಡೆ "ಮೀಟರ್" ಗೆ ಕೂರುತ್ತಿಲ್ಲ ಅನ್ನುವುದು ಬಿಟ್ಟರೆ ಒಳ್ಳೆಯ ಪ್ರಯೋಗ.
ಜಯಂತ್ ಸರ್ ಓದಿದ್ರೆ ಸ್ವಲ್ಪ ಹೆದರಿಕೆಯಲ್ಲಿ ಇರ್ತಾರೆ... ನನ್ನ ಕೆಲಸಕ್ಕೆ ಕುತ್ತು ಬಾರೋ ಚಾನ್ಸ್ ಇದೆ ಅಂತ :) ಚನ್ನಾಗಿದೆ ನಿಮ್ಮ ಪ್ರಯತ್ನ...
ReplyDeleteಶರಶ್ಚಂದ್ರ ಕಲ್ಮನೆ
ಚೆನ್ನಾಗಿದೆ. ಆದರೆ ಕೆಲವೆಡೆ ಮೀಟರ್‍ಗೆ ಹೊಂದುತ್ತಿಲ್ಲ.
ReplyDeleteಮುಡಿಯನೇರಲು -> ಮುಡಿಯನೇರೆ, ತೇರನೆಳೆಯೋಣಾ ->ತೇರನೆಳೆಯುವಾ, ನಲಿಯೋಣಾ ->ನಲಿಯುವಾ, ಈಗಲಾದರೂ ಕೊಡು ಹುಡುಗಾ -> ಈಗಲಾದರೂ ಕೊಡುವೆಯಾ... ಹೀಗೆ ಕೆಲವು ಬದಲಾವಣೆಗಳನ್ನು ಮಾಡಿದರೆ ಟ್ಯೂನ್‍ಗೆ ಸರಿಹೊಂದಬಹುದೇನೊ.
ದಿವ್ಯಾ ಮೇಡಂ,
ReplyDeleteನಾನು ಯಾವಾಗಲೂ ಗುನುಗುವ ಹಾಡು ಇದು..... ನಾನೂ ಸಹ ಇದನ್ನ ಬೇರೆ ಬೇರೆ ಸಾಹಿತ್ಯ ಹಾಕಿ ಹಾಡಿದ್ದೇನೆ ಆದ್ರೆ ಇದರಷ್ಟು ಚೆನ್ನಾಗಿ ಯೋಚಿಸಿರಲಿಲ್ಲ.....ಕವನ ತುಂಬಾ ಚೆನ್ನಾಗಿದೆ..... ಗೆಳೆಯನ ಪ್ರತಿಕ್ರೀಯೆ ಹೇಗಿತ್ತು ಹೇಳಿ....
chennagide..
ReplyDeleteDear Divya!!
ReplyDeletewhy dont u paste the audio link of your song!!??!!
Liked it very much
:-)
malathi S
ದಿವ್ಯ,
ReplyDeleteಪದ ಸಂಯೋಜನೆ ಬಹಳ ಚೆನ್ನಾಗಿದೆ...