- ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ತೆರಳುತ್ತಿರುವ, ಸಕಲರಿಗೂ ಆದರ್ಶಪ್ರಾಯ ಹಾಗೂ ಉತ್ತಮ ಮಾದರಿಯಾಗಿರುವ team-mate ಹರಿಹರನ್ ಗೆ, ಆತ್ಮೀಯ ವಿದಾಯ ಕೋರುತ್ತಾ ಬರೆದ ಕವನ...ನೂರಾರು ತಾರೆಗಳು ಮಿನುಗುತಿಹ ಆಗಸದಿ
ಸ್ಫುಟವಾಗಿ ಹೊಳೆದ ಧ್ರುವ ನಕ್ಷತ್ರ ನೀನು
ಕಣ್ಣು ಕೋರೈಸುವ ಸುವರ್ಣ ಹಾರದಲಿ
ಬೆಳಗಿದ ಸುಂದರ ಹವಳ-ಪದಕ ನೀನು
ಎರಡೇ ವರುಷಗಳಲಿ ಬಿಳಲು ಬಿಟ್ಟು
ಬಹು ಎತ್ತರಕೆ ಬೆಳೆದ ವೃಕ್ಷ ನೀನು
ಅಸಹಾಯಕತೆಯಲಿ ಕೊಚ್ಚಿಹೋಗುತಿಹರಿಗೆ
ಆಧಾರವಾಗಿ ಸಿಕ್ಕಿದ ಬೃಹತ್ ಬಂಡೆ ನೀನು
ಎಲ್ಲರೊಳು ಒಂದಾಗಿ, ಎಲ್ಲರೊಳು ಮುಂದಾಗಿ
ಎಲ್ಲರ ಪ್ರೀತಿಯನೂ ಗೆದ್ದಿರುವ ಧೀರ ನೀನು
ಗುರಿ ಸಾಧನೆಗಾಗಿ - ಸಪ್ತ ಸಾಗರ ದಾಟಿ
ಅದರಾಚೆಗಿನ ಮಾಯಾನಗರಿ ಸೇರುತಿಹ ನೀನು
ಬಿಟ್ಟು ಹೋಗುತಿರುವೆ ನಮ್ಮ ಮನಸುಗಳಲಿ
ಅಳಿಸಲಾಗದ ಹೆಜ್ಜೆ ಗುರುತುಗಳನು
ಆದರ್ಶಪ್ರಾಯ ಶ್ರಮದ ಹಾದಿಯನು
ಜೊತೆಗೆ ಒಂದಿಷ್ಟು ನೋವನ್ನೂ...
ಸುಂದರವಾಗಿರಲಿ ನಿನ್ನ ಬಾಳ ಪಯಣ
ನಿನಗಿದೋ ನಮ್ಮ ಆತ್ಮೀಯ ವಿದಾಯ....
ಉತ್ತಿ ಬಿತ್ತಿದ್ದು
8 months ago
ದಿವ್ಯಾ..
ReplyDeleteಕವನದ ಚೆಂದ ಅದರ ಕಂಪು ಸಂಕುತಗೊಳ್ಳದಿರಲಿ ತನ್ನ ಪರಿಧಿಯೊಳಗೆ
ಉತ್ತಮಗಳು ಎಲ್ಲರಿಗೆ..ಅಧಮಗಳು ನನಗೆ..ಮಧ್ಯಮ ನಮ್ಮವರಿಗೆ..
ನಿಮ್ಮ ಈ ಉತ್ತಮ ಹಾರೈಕೆ ಹೊತ್ತ ಕವನ ನಿಮ್ಮ ಸ್ನೇಹಿತನಿಗೆ ಶುಭ ಕೋರುವಂತೆ
ನಮ್ಮೆಲ್ಲರಿಗೂ ಏನೋ ಹಂಚುತ್ತಿದೆ..ಅಲ್ಲವೇ..?? ಅದೇ ಸೃಜನಾಮೃತ
ದಿವ್ಯ ಅವ್ರೆ,
ReplyDelete"ಬಿಟ್ಟು ಹೋಗುತಿರುವೆ ನಮ್ಮ ಮನಸುಗಳಲಿ ಅಳಿಸಲಾಗದ ಹೆಜ್ಜೆ ಗುರುತುಗಳನು" ಈ ಸಾಲು ಇಷ್ಟವಾಯಿತು, ಇಡಿ ಕವನ ಕೂಡ... ಅಗಲುವಿಕೆ ಅನಿವಾರ್ಯ... ಹಾಗೆ ಜೀವನದಲ್ಲಿ ಎಲ್ಲವೂ ಬದಲಾಗುತ್ತಿರುತ್ತವೆ... ನಿಮ್ಮ ಬೇಸರವನ್ನೂ ಮರೆತು ಗೆಳೆಯನಿಗೆ ಇಷ್ಟು ಸುಂದರ ಕವಿತೆಯನ್ನು ಅರ್ಪಿಸಿದ್ದೀರ.... ನಿಮ್ಮ ಗೆಳೆಯನ ಬಗ್ಗೆ ಹೊಟ್ಟೆ ಕಿಚ್ಚಾಗುತ್ತಿದೆ :)
ವಿದಾಯದ ಸಾಲುಗಳು ಎಂದಿಗೂ ಭಾವ ಸಾಗರದಲ್ಲಿ ತೋಯ್ದಿರುತ್ತವೆ.
ReplyDeleteಚೆನ್ನಾಗಿದೆ....
ReplyDeleteಆಜಾದ್ ರವರೆ,
ReplyDeleteಸೃಜನಾಮೃತವನ್ನು ಸವಿದು, ಪ್ರತಿಕ್ರಿಯಿಸಿದ್ದಕ್ಕೆ ಆತ್ಮೀಯ ಧನ್ಯವಾದಗಳು.
ಶರಶ್ಚಂದ್ರ,
ಹೊಟ್ಟೆಕಿಚ್ಚಾಗಿದೆ ಅಂತ ಹೇಳಿದ್ದೀರಾ... ಅದಕ್ಕೆ ಕಾರಣ ಏನಿದ್ದರೂ ಕವನ ಯಾರ ಬಗ್ಗೆ ಬರೆಯಲಾಗಿದೆಯೋ ಅವರ ಮೇರು ವ್ಯಕ್ತಿತ್ವ! ಮೆಚ್ಚುಗೆ ಸೂಚಿಸಿದಕ್ಕೆ ಧನ್ಯವಾದಗಳು.
ಚೇವಾರ್,
ನಿಮ್ಮ ಮಾತು ಅಕ್ಷರಶಃ ಸತ್ಯ... ಆ ಭಾವ ಸಾಗರವೇ ಈ ಕವನದ ಜನನಕ್ಕೆ ಕಾರಣ.. ಧನ್ಯವಾದಗಳು.
ಜೋಮನ್ ,
ಕವನ ಮೆಚ್ಚಿದ್ದಕ್ಕೆ ಧನ್ಯವಾದಗಳು.