Monday, July 6, 2009

ಪಯಣ


ಪುಟ್ಟ ಜೀವವೊಂದು ಸಾಗುತಿದೆ ಬೇಸರದಿ
ತನ್ನ ಒಲವ ಗೂಡಿನಿಂದ ದೂರ ದೂರಕ್ಕೆ
ಅರಿವಿಲ್ಲದೆ ಜಾರಿದ್ದವು ಕಣ್ಣಿಂದ ಹನಿಗಳು
ಪ್ರತಿ ಹನಿಯಲೂ ಕಾಣುತಿತ್ತು
ಕಳೆದ ಕ್ಷಣಗಳ ಮಧುರ ನೆನಹುಗಳ
ಅಚ್ಚಳಿಯದ ಪ್ರತಿಬಿಂಬ
ಹರಿಯುತಿತ್ತು ಹನಿ ಸಾಲು ಒಂದಿನಿತು ನಿಲ್ಲದೆ
ಕಣ್ಮರೆಯಾಗುವ ಆ ಬಿಂಬವನ್ನು ನೆನೆಯುತ್ತಾ
ಸಿಹಿಯಾಗಿತ್ತು ಜಾರಿದ ಆ ಕಣ್ಣೀರ ಹನಿ ಬಿಂದು
ಜೇನುಗೂಡಿನಲಿ ಕಳೆದ ಸವಿಗೆ ಕುರುಹಾಗಿತ್ತು

7 comments:

  1. ಚಿತ್ರಕ್ಕೆ ಹೊಂದಿಗೆಯಾಗೋ ಕವನ ..ಚೆನ್ನಾಗ್ ಬರೆದಿದ್ದೀಯಾ ತಂಗಮ್ಮಾ. ನನ್ನ ಮೇಲಿನ ಮುನಿಸಲ್ಲಿ ಇನ್ನೊಂದು ಬರೆ...ಆವಾಗ ಇ ನ್ನೂ ಚೆನ್ನಾಗ್ ಇರುತ್ತೆ ನಿನ್ನ ಕವನ
    -ಧರಿತ್ರಿ

    ReplyDelete
  2. ಚೆನ್ನಾಗಿದೆ

    ReplyDelete
  3. ಧರಿತ್ರಿ, ಸಂತೋಷ್, ಕಲ್ಯಾಣ್.... ಕವನ ಮೆಚ್ಚಿದ್ದಕ್ಕೆ ಧನ್ಯವಾದಗಳು
    -ಪ್ರೀತಿಯಿಂದ,
    ದಿವ್ಯಾ

    ReplyDelete
  4. ಕವನ ತುಂಬಾ ಚೆನ್ನಾಗಿದೆ. ಎಲ್ಲೋ ನಮ್ಮ ಭಾವನೆಗಳೊಂದಿಗೆ ತಾಕಲಾಡುತ್ತಿವೆಯೇನೋ ಅನ್ನಿಸುತ್ತದೆ...

    ಗೋಪಾಲ್ ಸೋಮಯ್ಯ

    ReplyDelete
  5. ನಿಮ್ಮ ಮೆಚ್ಚುಗೆಗೆ, ಅನಿಸಿಕೆಗೆ ಧನ್ಯವಾದಗಳು ಗೋಪಾಲ್
    - ದಿವ್ಯಾ.

    ReplyDelete
  6. naanu oadutta banda nimma ella kavnagaloo chendagive.heege barta irali. biduvaadaga nimma blog ge bheti koduttiruttene.:)

    ReplyDelete