Friday, August 14, 2009

ಕಾಲಚಕ್ರ ತಿರುಗಿದಾಗ...


ಸ್ವಾತಂತ್ರ್ಯದಿನವೆಂದರೆ

ಅಂದು -
ಎಲ್ಲಿಲ್ಲದ ಹುರುಪು, ಚಿಮ್ಮುವ ಉತ್ಸಾಹ
ವಂದೇ ಮಾತರಂ, ಸಾರೇ ಜಹಾನ್ಸೆ ಹಾಡುವುದಕೆ
ಗಾಂಧೀ ಮೈದಾನಕೆ ಮೆರವಣಿಗೆಯಲಿ ಸಾಗುವುದಕೆ
ದೂರದರ್ಶನದಿ ದಿಲ್ಲಿ ಧ್ವಜಾರೋಹಣ ನೋಡುವುದಕೆ
ಇಂದು -
ಉಳಿದೆಲ್ಲವುಗಳಂತೆ ಮತ್ತೊಂದು ರಜಾದಿನ
ಹಳೆಯ ದಿನಗಳನು ನೆನಪಿಸಿಕೊಳ್ಳುವುದಕೆ
ಕಳೆದ ಬಾಲ್ಯದ ಮುಗ್ಧತೆಗೆ ಕೊರಗುವುದಕೆ
ಟಿ.ವಿ ಎದುರು ಕುಳಿತು ಚಾನಲ್ಲು ಬದಲಾಯಿಸುವುದಕೆ !
********

ಹಬ್ಬದ ದಿನ

ಅಂದು -
ಮೊದಲು ಮದುವೆಯಾದ ಕುಟುಂಬದ ಹಿರಿ ಮಗಳು
ಎಲ್ಲರೂ ಸೇರುವ ಗಣೇಶ ಹಬ್ಬಕೆ ತಾನು ತಪ್ಪಿದೆನಲ್ಲಾ
ಎಂದು ಕೊರಗಿದಳು
ಇಂದು -
ಮದುವೆಯಾಗಿಹರು ಬಹುತೇಕ ಹುಡುಗಿಯರು
ಎಲ್ಲರೂ ಸೇರುವ ಗಣೇಶ ಹಬ್ಬಕ್ಕೆ ಈಗ್ಯಾರು ಇಲ್ಲೆಂದು
ಕೊನೆಯ ಕಿರಿ ಮಕ್ಕಳು ಬೇಸರಿಸುತಿಹರು !
********

ಪರೀಕ್ಷೆ

ಅಂದು -
ಅನಿಸುತ್ತಿತ್ತು ಶಿಕ್ಷಣದ ಪ್ರತಿ ಮಜಲಿನಲ್ಲೂ
ಯಾವಾಗ ಮುಗಿಯುವುದೋ ಇವುಗಳ ಸಹವಾಸ
ಪ್ರತಿ ತಿಂಗಳು, ಪ್ರತಿ ಸೆಮಿಸ್ಟರು ಎಷ್ಟೊಂದು ಓದುವಿಕೆ
ಎಷ್ಟೊಂದು ಕಷ್ಟ ಏನು ಕರ್ಮವೋ
ಇಂದು -
ಯಾರದೇ ಕಟ್ಟು ನಿಟ್ಟಿಲ್ಲ... ವರ್ಷವಾದರೂ
ಗಳಿಸಬೇಕಂದುಕೊಂಡಿದ್ದು ಇನ್ನೂ ದಕ್ಕಿಲ್ಲ
ಅನಿಸುತಿದೆ - ಇರಬಾರದಿತ್ತೆ ಈಗಲೂ ಪರೀಕ್ಷೆ
ಹೇಗಾದರೂ ಮುಗಿಯುತ್ತಿತ್ತು ಪರೀಕ್ಷೆಯ ಮೊದಲು
ದಕ್ಕುತ್ತಿತ್ತೇನೋ ಎಲ್ಲವೂ ಅಂದುಕೊಂಡ ಸಮಯಕೆ !

6 comments:

  1. ಅಂದಿನ-ಇಂದಿನ ಕಾಲದ ಒಳ್ಳೆಯ ಉದಾಹರಣೆ.

    ಯಾರದೇ ಕಟ್ಟು ನಿಟ್ಟಿಲ್ಲ... ವರ್ಷವಾದರೂ
    ಗಳಿಸಬೇಕಂದುಕೊಂಡಿದ್ದು ಇನ್ನೂ ದಕ್ಕಿಲ್ಲ

    ಇದೇ ಸಾಲುಗಳಲೇ ನನ್ನ ಇಂದಿನ ಕಾಲದ ಮೆಲ್ಲ ಮೆಲ್ಲ ಕರಗುವಿಕೆ ಇದೆ..:)

    ReplyDelete
  2. ತಂಗಮ್ಮಾ..ನೋಡು ನಿನ್ನ ಕವನಕ್ಕೂ ನನ್ನ ಲೇಖನಕ್ಕೂ ಸಾಮ್ಯತೆ ಇದೆ ಕಣೇ. ಚೆನ್ನಾಗಿದೆ ನಿನ್ ಕವನ
    -ಧರಿತ್ರಿ

    ReplyDelete
  3. ಹಿರಿಯರಾದರೆ ಒಂದು ಕೊರಗು, ಕಿರಿಯರಾದರೆ ಮತ್ತೊಂದು ರೀತಿಯಲಿ ಮುಖ ಬಿಗು. ಮಧ್ಯದವರದೋ ಕಂಪ್ಲೇಂಟು ಇನ್ನೊಂದು ರೀತಿಯದ್ದು (ಪಾಂಡವರಲ್ಲಿ ಭೀಮನೇ ನಿರ್ಭಾಗ್ಯ ಮಧ್ಯಮ ಎಂದು ಹೇಳಿಸಿಲ್ಲವೇ ಕವಿಗಳು). ಚನ್ನಾಗಿವೆ ದಿವ್ಯಾ ನಿಮ್ಮ ಕವನಗಳು...

    ReplyDelete
  4. ಮೆಚ್ಚಿದ ಮಿತ್ರರಿಗೆಲ್ಲಾ ಆತ್ಮೀಯ ವಂದನೆಗಳು..

    ReplyDelete