Saturday, June 20, 2009

ಅವಳು ಮತ್ತು ಅವನು

ಅವಳು ಸುಮ್ಮನಿದ್ದಳು
ಯಾವುದರ ಪರಿವೆಯೇ ಇಲ್ಲದೆ
ಅವಳು ಖುಷಿಯಲಿದ್ದಳು
ಅವಳದೇ ಮುಗ್ಧ ಲೋಕದಲ್ಲಿ

ಅವನು ಬಂದನು ಆಗ
ಅವಳ ಲೋಕವನ್ನು ನೋಡಿದ
ಅವಳ ಖುಷಿಗೆ ತಾನೂ ಖುಷಿ ಪಟ್ಟ
ಇನ್ನೂ ಖುಷಿ ಪಡಿಸಲು ಪಣ ತೊಟ್ಟ

ಅವಳ ಬಾಳಿಗೆ ದೀಪವಾಗಲು
ತಾನು ಉರಿಯ ಹೊರಟನು
ಬೆಂಕಿಯ ತಾಪಕೆ ಹೆದರಿ
ದೂರ ಹೊರಟಳು ಆಕೆ

ತಂಪನೆರೆಯುವೆನೆಂದು ತಾನು
ಮಂಜುಗಡ್ಡೆಯಾಗಹೊರಟನು
ಆಕೆ ಆತನಿಗಾಗಿ ಕರಗಲಿಲ್ಲ
ಅತಿಯಾದ ತಂಪಿಗೆ ಶಿಲೆಯಾದಳು

ಆಕೆಯನು ಕಥಾನಾಯಕಿಯಾಗಿಸಲು
ಹೊರಟಿದ್ದ ಅವನು - ತಾನೇ ಕಥೆಯಾದ
ಆಕೆಯೋ ಕಥೆಯ ಓದುಗಳಾದಳು
ತನ್ನ ಬದುಕಿಗೊಂದು ನೀತಿ ಪಾಠ ಕಲಿತಳು

10 comments:

  1. ಆಕೆಯನು ಕಥಾನಾಯಕಿಯಾಗಿಸಲು
    ಹೊರಟಿದ್ದ ಅವನು - ತಾನೇ ಕಥೆಯಾದ
    ಆಕೆಯೋ ಕಥೆಯ ಓದುಗಳಾದಳು
    ತನ್ನ ಬದುಕಿಗೊಂದು ನೀತಿ ಪಾಠ ಕಲಿತಳು

    ಈ ಸಾಲು ತುಂಬಾ ಸೊಗಸಾಗಿದೆ....!!!

    ReplyDelete
  2. ಕವನ ಚೆನ್ನಾಗಿದೆ... ತುಂಬ ಸರಳ ಶಬ್ಧಗಳಲ್ಲಿ ತುಂಬ ವಿಷಯಗಳನ್ನು ಹೇಳಿದ್ದೀರಿ...

    ReplyDelete
  3. ದಿವ್ಯಾ..simply super analogy...
    ಅವಳಿಗೆ ದೀಪವಾಗಲು ತಾನು ಉರಿದರೆ..ಆ ತಾಪಕೆ ಹೆದರಿ ದೂರ ಸರಿದ ಆಕೆ..!
    ತಂಪನೆರೆಯಲು ಮಂಜುಗಡ್ಡೆಯಾದವನಿಗೆ ಕರಗದೇ ತಾನೇ ಶಿಲೆಯಾದ ಆಕೆ..!!
    ಅವಳನ್ನು ಕಥಾನಾಯಕಿಯಾಗಿಸಲು ಕಥೆಯಾದರೆ ಅವಳೇ ಓದುಗಳಾದ ಆಕೆ !!!
    ತುಂಬಾ ಚನ್ನಾಗಿ ಮೂಡಿದೆ..

    ReplyDelete
  4. ಕವಿತೆಯ ಪ್ರತಿಯೊಂದು ಸಾಲು ಜೀವ ತುಂಬಿಕೊಂಡಿದೆ.
    ತುಂಬಾ ಚನ್ನಾಗಿದೆ ನಿಮ್ಮ ಕವಿತೆ

    ReplyDelete
  5. ಜ್ಞಾನಮೂರ್ತಿ, ದಿನೇಶ್, ಆಜಾದ್, ಶಿವಪ್ರಕಾಶ್, ಮೆಚ್ಚುಗೆಗೆ ಧನ್ಯವಾದಗಳು...

    "ಆಕೆಯನ್ನು, ತನ್ನ ಜೀವನದ ಕಥಾನಾಯಕಿಯನ್ನಾಗಿಸಲು ಹೊರಟ ಅವನು ತಾನೇ ದುರಂತ ಕತೆಯಾದ" - ಈ ಸಾಲು ತಂದೆ, ಪಿ.ಸತೀಶ್ ಮಲ್ಯ ಅವರ, "ದಿಟ್ಟೆ" ಎಂಬ ಕಥೆಯೊಂದರ ಸಾಲು. ಅಪ್ಪಂದಿರ ದಿನದ ಮುನ್ನಾ ದಿನ, ಅಪ್ಪನ ಕಥೆಯೊಂದರ ಸಾಲಿನಿಂದ ಪ್ರೇರಿತಗೊಂಡು ಬರೆದ ಈ ಕವನ, ಪ್ರೀತಿಯಿಂದ ಅಪ್ಪನಿಗೆ...

    - ದಿವ್ಯಾ.

    ReplyDelete
  6. ಕವನ ತುಂಬಾ
    ಭಾವ ಪೂರ್ಣವಾಗಿ ಬರೆದಿದ್ದೀರಿ...

    ಅಭಿನಂದನೆಗಳು...

    ReplyDelete
  7. ಧನ್ಯವಾದಗಳು ಪ್ರಕಾಶರವರೆ..

    ReplyDelete
  8. ದಿವ್ಯ ಮೇಡಮ್,

    ಕವನ ಭಾವಪೂರ್ಣವಾಗಿದೆ....ಕೊನೆಯ ನಾಲ್ಕು ಸಾಲುಗಳು ತುಂಬಾ ಚೆನ್ನಾಗಿವೆ..

    ಧನ್ಯವಾದಗಳು.

    ReplyDelete
  9. ದಿವ್ಯಾರೇ...ಅಪ್ಪನಿಂದ ಪ್ರೇರಿತರಿಗೆ ತಪ್ಪದೇ ಯಶಸಿಗುತ್ತೆ....ಅಂದಹಾಗೆ..ನಿಮ್ಮ ತಂದೆಯವರ ಕೃತಿಗಳ ಬಗ್ಗೆ ಸ್ವಲ್ಪ ಬರೀಬಹುದಲ್ಲ ನಿಮ್ಮ ಬ್ಲಾಗಿನ ಮೂಲಕ..??

    ReplyDelete
  10. ಶಿವೂರವರೆ, ಕವನ ಮೆಚ್ಚಿದ್ದಕ್ಕೆ ಧನ್ಯವಾದಗಳು
    ಆಜಾದ್ ರವರೆ, ನಿಮ್ಮ ಸಲಹೆಗೆ ಧನ್ಯವಾದಗಳು... ಖಂಡಿತಾ ಪ್ರಯತ್ನಿಸುತ್ತೇನೆ.

    ReplyDelete