-ಪ್ರೀತಿಯ ತಂಗಿ ಶುಭಾಳಿಗಾಗಿ, ಪ್ರೀತಿ ತುಂಬಿ ಬರೆದದ್ದು...
ಮುದ್ದಾದ ನೋಟದಿಂದ ಹೃದಯವನು ಗೆಲ್ಲುವ
ಒಮ್ಮೊಮ್ಮೆ, ಮುಗ್ಧ ಪ್ರಶ್ನೆಗಳಿಂದ ಮನಸೂರೆಗೊಳ್ಳುವ
ಇನ್ನೊಮ್ಮೆ, ಗಾಂಭೀರ್ಯ ಮೈವೆತ್ತು ಕಂಗೊಳಿಸುವ
ಮತ್ತೊಮ್ಮೆ, ಚತುರ ಮಾತುಗಳಿಂದ ನಕ್ಕು ನಗಿಸುವ
ಬೇಸರವಾದೊಡೆ ನನ್ನ ಬೊಗಸೆಯಲಿ ಕಣ್ಣೇರು ಹರಿಸುವ
ಸಂತೋಷವಾದೊಡೆ ನನ್ನೊಡನೆ ಹಂಚಿ, ಹಾರಾಡುವ
ನನ್ನ ಭಾವನೆಗಳನ್ನೆಲ್ಲಾ ಕೆದಕಿ ವಿಚಾರಿಸುವ
ನನ್ನ ಕೈಯೊಡನೆ ಕೈ ಸೇರಿಸಿ, ಶಾಲೆಗೆ ಜೊತೆ ನಡೆದ
ಎಂದಿಗೂ, ಯಾವುದಕೂ, ಬಹುವಾಗಿ ಚಿಂತಿಸದ
ನಗು ನಗುತಾ, ಎಲ್ಲರನೂ ನಗಿಸುತ್ತಲಿರುವ
ಪ್ರೀತಿಯ ಒಲುಮೆಯ ಮುದ್ದಿನ ತಂಗಿಗೆ
ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು !
ಉತ್ತಿ ಬಿತ್ತಿದ್ದು
8 months ago
ದಿವ್ಯ,
ReplyDeleteನನ್ನ ಕಡೆಯಿಂದಲೂ ನಿಮ್ಮ ತಂಗಿಗೆ ಹುಟ್ಟು ಹಬ್ಬದ ಹಾರ್ಧಿಕ ಶುಭಾಷಯಗಳು, ಬಾಳು ಬೆಳಗಲಿ.
ದಿವ್ಯ... ಹೂ ನಗು ಸದಾ ನಿಮ್ಮ ತಂಗಿಯ ಜೊತೆ ಇರಲಿ ಎಂದು ಅರೆಸುತ್ತ ನಿಮ್ಮ ಮುದ್ದಿನ ತಂಗಿಗೆ ಹುಟ್ಟು ಹಬ್ಬದ ಶುಭಶಯಗಳನ್ನ ತಿಳಿಸಿಬಿಡಿ...
ReplyDeleteಹೀಗೆ ಬೆಳಗಲಿ ಅಕ್ಕ-ತಂಗಿಯ ಸಂಬಂಧ ...
ದಿವ್ಯಾ,
ReplyDeleteನಿಮ್ಮ ತಂಗಿಗೆ ನನ್ನ ಕಡೆಯಿಂದ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು,
'' ಬದುಕು ಎಲ್ಲರೂ ಮೆಚ್ಚುವಂತಿರಬೇಕು. ಎಲ್ಲರ ಮೆಚ್ಚಿಸಲು ಬದುಕಾಗಬಾರದು'' ಆಲ್ವಾ,
ನಿಮ್ಮ ತಂಗಿ ಹಾಗೂ ನೀವು ಎಂದೂ ನಗು ನಗುತ್ತಾ ಇರಿ,
ನಿಮ್ಮ ತಂಗಿಗೆ,
ReplyDeleteಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು
ದಿವ್ಯ,
ReplyDeleteನಿಮ್ಮ ಮುದ್ದಿನ ತಂಗಿಗೆ ನಮ್ಮ ಕಡೆ ಇಂದಾನು ಶುಭಾಶಯಗಳನ್ನು ತಿಳಿಸಿ...
ಗುರು
ರಾಜೇಶ್, ನವೀನ, ಗುರು, ಶಿವಪ್ರಕಾಶ್, ಗುರು....
ReplyDeleteನಿಮಗೆಲ್ಲರಿಗೂ, ನನ್ನ ಕಡೆಯಿಂದ ಹಾಗೂ ವಿಶೇಷವಾಗಿ ನನ್ನ ತಂಗಿಯ ಕಡೆಯಿಂದ ಪ್ರೀತಿಪೂರ್ವಕ ಧನ್ಯವಾದಗಳು :-))
ನಗುತಾ, ನಗಿಸುವ ಮುದ್ದಿನ ತಂಗಿಗೆ ನನ್ನದೂ ಪ್ರೀತಿಯ ಶುಭಾಶಯ ಹೇಳಿ ದಿವ್ಯಾ. ತಡವಾಗಿ ಶುಭಾಶಯ ಹೇಳಿದೆ ಅಂತ ಮುನಿಸ್ಕೋಬೇಡ ಅಂತ ತಂಗಿಗೆ ಹೇಳಿ ಆಯಿತಾ?
ReplyDeleteತಂಗಿ ಬದುಕಿನ ಹಾದಿಯಲ್ಲಿ ನಗುವಿನ ಚಿತ್ತಾರವಿರಲಿ..
ಖುಷಿಯ ಬೆಳಕು ನಿತ್ಯ ಸುಪ್ರಭಾತವಾಗಲೀ...
ನನದೂ ಹಾರೈಕೆಯಿದೆ ತಂಗಿ...ನಿನಗಿದೋ ಶುಭಾಶಯ...
-ಪ್ರೀತಿಯಿಂದ..
ಧರಿತ್ರಿ
ಪ್ರೀತಿಯ ಧರಿತ್ರಿ,
ReplyDeleteನಿಮ್ಮ ಆತ್ಮೀಯ ಹಾರೈಕೆಗೆ ಧನ್ಯವಾದಗಳು.. ತಂಗಿ ಖುಷಿಯಿಂದ ಇನ್ನೂ ಒಂದಿಂಚು ಮೇಲಕ್ಕೆ ಹಾರಿದ್ದಾಳೆ :-) ಮುನಿಸು ಖಂಡಿತಾ ಇಲ್ಲ ಗೆಳತಿ..
-ದಿವ್ಯಾ