Friday, May 20, 2011

ದಿವ್ಯಾ Weds ಸಂದೀಪ್ !





ದಿನ ಉರುಳಿ ಯುಗವಾಗಿ
ಮನವೆರಡು ಒಂದಾಗಿ
ಪಿಸುಮಾತು ನುಡಿಯಾಗಿ
ಕನಸೊಂದು ನನಸಾಗಿದೆ..

ಚೈತ್ರವು ಚಿಗುರಾಗಿದೆ
ಮಾಮರವು ಕೊನರಿದೆ
ಭೂಮಿ ಕಾದು ನಿಂತಿದೆ
ಆಗಸದ ಮಿಲನಕೆ...

ಕಡಲು ಭೋರ್ಗರೆಯುತಿದೆ
ತೀರದ ಸೆಳೆತವಿದೆ
ನದಿಯು ಓಡೋಡಿ ಸಾಗುತಿದೆ
ಭಾವ ಜೀವ ತಳೆಯಲು - ಕಡಲ ತೀರದಲಿ!!!

---------------------------------------------------

ಸ್ನೇಹಿತರೆ,

ಹೊಸ ಬದುಕಿನ ಹೊಸ ಆರಂಭಕೆ
ಮುನ್ನುಡಿ ಬರೆಯುತಿಹೆವು,
ಅಲ್ಲೊಂದು ಖುಷಿಯಿದೆ, ವಚನವಿದೆ
ಸಡಗರವಿದೆ, ಸಂತಸವಿದೆ, ಊಟವಿದೆ :)

ಸತಿ ಪತಿಗಳಾಗುತಿಹೆವು,
ಜೂನ್ ೫, ೨೦೧೧ - ಆದಿತ್ಯವಾರದಂದು
೧೨.೨೮ರ ಅಭಿಜಿನ್ ಲಗ್ನದ ಸುಮುಹೂರ್ತದಲ್ಲಿ
ಉಡುಪಿಯ ಶಾರದಾ ಕಲ್ಯಾಣ ಮಂಟಪದಲ್ಲಿ

ನೀವು ಬರಬೇಕು, ನಮ್ಮೊಂದಿಗಿರಬೇಕು, ನಮ್ಮನ್ನು ಹರಸಬೇಕು
ನಮ್ಮ ಆತಿಥ್ಯವನ್ನು ಸ್ವೀಕರಿಸಬೇಕು..

ನಿಮ್ಮ ಆಗಮನದ ನಿರೀಕ್ಷೆಯಲ್ಲಿ...
ದಿವ್ಯಾ ಮತ್ತು ಸಂದೀಪ್

11 comments:

  1. chanda jallaa divya!!! khushi jaalle tumgele way of inviting!!!
    Wishing you greatest Happiness!
    :-)
    malathi,srikanth,malavika ani Niharika

    ReplyDelete
  2. ಹೊಸ ಬಾಳಿನ ಹೊಸಿಲಲಿ ನಿಂತಿರುವ ಹೊಸ ಜೋಡಿಗೆ ಶುಭವಾಗಲಿ...

    ಶುಭಾಶಯಗಳು...
    ಶಿವಪ್ರಕಾಶ್

    ReplyDelete
  3. Congrats Divya..:-)

    Happy to see two bloggers getting married...:-)
    Wishing you happy married life in advance..:-)

    ReplyDelete
  4. ಶುಭಾಶಯಗಳು ದಿವ್ಯಾ :-)

    ReplyDelete
  5. ಹೊಸ ಬಾಳಿನ ಹೊಸಿಲಲಿ ನಿಂತಿರುವ ಹೊಸ ಜೋಡಿಗೆ ಶುಭವಾಗಲಿ...

    Guru

    ReplyDelete
  6. ದಿವ್ಯಾ ಮತ್ತು ಸಂದೀಪ್,
    ಇಬ್ಬರಿಗೂ ಶುಭಾಶಯಗಳು.....
    ಹೊಸ ಜೀವನ ಸದಾ ಸಿಹಿಯಾಗಿರಲಿ.....

    ReplyDelete
  7. ನಿಮ್ಮ ಹೊಸ ಬಾಳಿಗೆ, ಹೊಸ ಕನಸಿಗೆ ನನ್ನ ಸಾವಿರ ಹಾರೈಕೆಗಳು..
    ಆ ದೇವರು ನಿಮ್ಮೆಲ್ಲ ಕನಸುಗಳನ್ನು ಈಡೇರಿಸಿಕೊಳ್ಳಲು ನಿಮಗೆ ಶಕ್ತಿ ಕೊಡಲಿ..

    ReplyDelete