Sunday, May 10, 2009

ನಮನ


ಶೈಶವದಾರಂಭದಲಿ ಅಂಬೆಗಾಲಿಡುವಾಗ
ಪ್ರಥಮ ಹೆಜ್ಜೆಗೆ ಕಾಲೂರಿದಾಗ
ಓಡುತ, ಆಡುತ ಜಾರಿ ಬಿದ್ದಾಗ
ಕೈ ಹಿಡಿದು ನಡೆಸಿದ ಮಾತೆಗೆ ನಮನ

ಬಾಲ್ಯದಲಿ ಎಲ್ಲದಕೂ ಹಠ ಮಾಡಿದಾಗ
ಊಟಕ್ಕೆ ತಿಂಡಿಗೆ ರಚ್ಚೆ ಹಿಡಿದಾಗ
ಚಂದಮಾಮನ ತೋರಿಸಿ ಕಥೆ ಹೇಳಿದಮ್ಮನಿಗೆ
ತಲೆ ಬಾಗಿ ಮಾಡುವೆ, ಪ್ರೀತಿಯ ನಮನ

ಗುರಿಯತ್ತ ಸಾಗಲು ದೂರಕ್ಕೆ ಹೊರಟಾಗ,
ಕಣ್ಣಿಂದ ಹನಿ ಬಿಂದು, ನಿಲ್ಲದೆ ಹರಿದಾಗ
ಅದ ತಡೆದು, ದೃಷ್ಟಿಯನು ಗುರಿಯೆಡೆಗೆ ಹಾಯಿಸಿದ
ನಲ್ಮೆಯ ಮಾತೆಗೆ ಒಲುಮೆಯ ನಮನ

ಸಂತಸದ ನಗುವನ್ನು ಹೆಚ್ಚಿಸಿದಳಾಕೆ
ಮನದ ದುಗುಡವನು ಇಲ್ಲವಾಗಿಸಿದಾಕೆ
ಸುಂದರ ಬಾಳನ್ನು ಕೊಟ್ಟ ಅಮ್ಮ
ನಿನಗಿದೋ ನನ್ನ ಸಾಷ್ಟಾಂಗ ಪ್ರಣಾಮ...

6 comments:

  1. ಅಮ್ಮನ ದಿನಕ್ಕೆ ಅದ್ಭುತವಾದ ಸಾಲುಗಳು. ನನ್ನ ಪ್ರೀತಿಗೆ ಪಾತ್ರರಾಗಿರುವ, ಸದಾ ಮಗನೆಂದೇ ಪ್ರೀತಿ ತೋರುವ ನನ್ನ ತ್ರಿಮೂರ್ತಿ ಅಮ್ಮಂದಿರ ನೆನಪಾಯಿತು. ನೆನಪಿನ ಭಾವ ಹುಟ್ಟಿಸಿದ್ದಕ್ಕೆ ಧನ್ಯವಾದಗಳು.

    ReplyDelete
  2. ದಿವ್ಯ,
    ಕವನ ತುಂಬಾ ಚೆನ್ನಾಗಿದೆ, ಮತ್ತು ಪರಿಪೂರ್ಣವೆನಿಸುತ್ತದೆ.

    ReplyDelete
  3. ಒಳ್ಳೆಯ ಕವನ ದಿವ್ಯಾ.

    ReplyDelete
  4. @ Chevar - ನಿಮ್ಮಲ್ಲಿ ನೆನಪಿನ ಭಾವ ಮೂಡುವದಕ್ಕೆ "ನಮನ" ಕಾರಣವಾದುದಕ್ಕೆ ಸಂತೋಷ. ಅಮ್ಮನ ಪ್ರೀತಿಗೆ ಅದೆಂತು ವಂದನೆಗಳನ್ನು ಸಲ್ಲಿಸಿದರೂ ಸಾಲುವುದಿಲ್ಲ ಅಲ್ಲವೇ? ನಿಮ್ಮ ಪ್ರತಿಕ್ರಿಯೆಗೆ ಕೃತಜ್ನತೆಗಳು.

    ರಾಜೇಶ್, ಸಂದೀಪ್,
    ಪ್ರೀತಿಪೂರ್ವಕ ಧನ್ಯವಾದಗಳು.

    ReplyDelete
  5. yello manasina muule yelli kulithidha baalyadha nenapanna
    badidhebisi nenapisidha divya ge nanna namana

    ReplyDelete
  6. ಗಿರೀಶ್ ,
    ತುಂಬಾ ದೊಡ್ಡ ಮಾತು ಹೇಳಿದ್ದೀಯಾ... ನಮ್ಮೆಲ್ಲ ನೆನಪುಗಳಿಗೆ, ಕಾರಣವಾದ ಆ ಅಮ್ಮನ ಪ್ರೀತಿಗೆ ನಮನ ಎಂದು ಹೇಳೋಣವೇ? ಪ್ರತಿಕ್ರಿಯಿಸಿದಕ್ಕೆ, ಹೃತ್ಪೂರ್ವಕ ಧನ್ಯವಾದಗಳು :-)

    ReplyDelete