Monday, May 4, 2009

ಕಲ್ಲು


ಉರುಳುವ ಕಲ್ಲಿಗೆ ನೆಲೆಯಿಲ್ಲ ಬೇರಿಲ್ಲ
ನಿಂತು ಅದನಾರೂ ನೋಡುವರೇ ಇಲ್ಲ
ಫುಟ್ ಬಾಲಿನಂತೆ ತಳ್ಳುವರೆ ಎಲ್ಲಾ
ಜಗಕೆಂದು ಅದರ ಪರಿವೆಯೇ ಇಲ್ಲಾ

ಪುಟ್ಟ ಕಲ್ಲೆಂದು ಜನಕೆ ತಾತ್ಸಾರ
ಸುಲಭದಲಿ ಎಸೆದು ಮಾಡುವರು ಜಯಕಾರ
ಒಂದಿನಿತು ಇಲ್ಲ ಅದರೆಡೆಗೆ ಮಮಕಾರ
ನೀಡರು ಯಾರೂ ಅದಕೆ ಸಹಕಾರ

ಅನುಭವಿಸುತಿದೆ ಅದು ಸಕಲ ನೋವನ್ನು
ಸಹಿಸುತಿದೆ ಉಳಿಯ ಪ್ರತಿ ಹೊಡೆತವನ್ನು
ಮುಂದುವರೆಸುತಿದೆ ತನ್ನ ಪ್ರಯತ್ನವನ್ನು
ತಾನೂ ಆಗಲು ಹೊಳೆವ ಹೊನ್ನು

ಸುತ್ತುಗಟ್ಟಿವೆ ರಾಶಿ ಮುತ್ತು ರತ್ನ
ಮುಚ್ಚಿಹಾಕಿವೆ ಈ ಪುಟ್ಟ ಕಲ್ಲನ್ನ
ಹೋರಾಡುತಿದೆ ಕಲ್ಲು ಅಸ್ತಿತ್ವಕ್ಕಾಗಿ
ತನ್ನ ಮಹಿಮೆಯನೂ ತೋರಿಸುವುದಕಾಗಿ

ಹೊಡೆತಗಳು ರೂಪಿಸುತಿವೆ ಭವ್ಯ ಕಾಯಕಲ್ಪ
ಭವಿಷ್ಯದಲಿ ಕಲ್ಲಾಗುವುದು ಸುಂದರ ಶಿಲ್ಪ
ನೆಲೆ ನಿಂತ ಕಲ್ಲಾಗಿ ಗಳಿಸುವುದು ಮರ್ಯಾದೆ
ಸಕಲರಿಗೂ ಮೂಡುವುದು ಪೂಜಿಸುವ ಇರಾದೆ

4 comments:

  1. Wow. ಕಲ್ಲಿನ ಬಗ್ಗೆ ಕವನ ತುಂಬ ಚೆನ್ನಾಗಿ ಇದೆ... ಕಲ್ಲಿಗೂ ಸಹಕಾರ ಬೇಕ? ಕಲ್ಲಿನ ಬಗ್ಗೆ ನಿಮಗಿರು ವ್ಯಾಮೋಹ ಕರುಣೆ ಕಂಡು ಆಶ್ಚರ್ಯ ಆಗ್ತಾ ಇದೆ... ಒಳ್ಳೆ ಕವನ,, ಹೀಗೆ ಮುಂದುವರಿಸಿ......
    ಗುರು

    ReplyDelete
  2. ತುಂಬಾ ಚೆನ್ನಾಗಿದೆ ಕವನ..ನಿರ್ಜೀವ ವಸ್ತುವಾದರೇನು ಅದಕೊ ಒಂದು ಜೀವನವೆಂಬುದಿರುತ್ತೆ......ನಿಮ್ಮ ಕವನದ ಶೈಲಿ ತುಂಬ ಇಷ್ಟವಾಯಿತು ಹೀಗೆ ಬರೆಯುತ್ತಲಿರಿ.
    ಇಂದು ಕೆಂಡಸಂಪಿಗೆಯಲ್ಲಿ ನಿಮ್ಮ ಬ್ಲಾಗ್ ಪರಿಚಯಿಸಿದ್ದಾರೆ...ಶುಭಾಶಯಗಳು
    ಧನ್ಯವಾದಗಳು

    ReplyDelete
  3. ಕೆಂಡಸಂಪಿಗೆಯಿಂದ ಪರಿಚಯವಯ್ತು. ಬ್ಲಾಗ್ ಥೀಮ್ ಚೆನ್ನಾಗಿದೆ.
    ಹಾಗೆಯೆ ಕವನಗಳು ಕೂಡಾ. ಗುಡ್ ಲಕ್...

    ReplyDelete
  4. ಕವನಕ್ಕೆ ಕಮೆಂಟ್ ಬರೆದ ಸಹೃದಯರೆಲ್ಲರಿಗೂ, ಹೃತ್ಪೂರ್ವಕ ಧನ್ಯವಾದಗಳು :-)
    ಸ್ನೇಹಿತರೆ, ಜೀವ ಇರುವ ವ್ಯಕ್ತಿಯನ್ನು, ನಿರ್ಜೀವ ಕಲ್ಲಿನಂತೆ ಪರಿಗಣಿಸಿದಾಗ, ಹೃದಯ ಬೇಸರದಿಂದ ಕಲ್ಲಾದಾಗ, ಮೂಡುವ ಭಾವನೆಗಳನ್ನು ವ್ಯಕ್ಯಪಡಿಸುವ ಒಂದು ಪ್ರಯತ್ನವೇ ಈ "ಕಲ್ಲು" !
    -ದಿವ್ಯಾ

    ReplyDelete