ಹನಿ ಹನಿ
ಹೊರಗೆ ಭೋರೆಂದು ಹೊಯ್ಯುತಿಹ ಮಳೆಯು
ಒಳಗೆ ಅರ್ಧರ್ಧ ಬರೆದಿಟ್ಟಿಹ ಸಾಲುಗಳನು
ನೋಡಿ ನಕ್ಕಂತೆ, ಅಟ್ಟಹಾಸದ ಗಾಳಿ ಬೀರುತಿದೆ
ಅದಕೆ ಪ್ರತೀಕಾರಗೈಯಲು ಕುಳಿತಿರುವೆ ನಾನು
ಪ್ರಕೃತಿಯ ಎದುರು ನಾನೊಂದು ಹುಲು ಮಾನವ
ಬರೆದದ್ದು ಬರೀ ಹನಿ ಹನಿ!
ನಲ್ಲ ಹೇಳಿದ್ದು
ಅಗಲಗೊಳ್ಳುತ್ತಿರುವ ನಿನ್ನೂರ ರಸ್ತೆಗಳೆಲ್ಲಾ,
ನೀ ಕೈ ಅರಳಿಸಿ ಕರೆದಂತೆ ಸ್ವಾಗತ ನೀಡುತಿವೆ
ಕಾಮಗಾರಿ ನಡೆಯುತ್ತಾ ಏಳುತ್ತಿರುವ ಕೆಂಪು ಧೂಳು
ನಾಚಿದ ನಿನ್ನ ಕೆಂಪು ಕೆನ್ನೆಯ ನೆನಪ ತರುತ್ತಿವೆ
ಪ್ರಶ್ನೆ - ಉತ್ತರ
"ಯಾಕೆ ನನ್ನಿನಿಯ, ನಿನಗೆ
ತಲೆ ನೋವು, ಭಾರ?"
"ಏನು ಮಾಡಲಿ ಪ್ರಿಯೆ
ತಲೆಯ ತುಂಬೆಲ್ಲ
ನೀನೇ ಇರುವೆಯಲ್ಲಾ !"
ಉತ್ತಿ ಬಿತ್ತಿದ್ದು
8 months ago
’ನಲ್ಲ ಹೇಳಿದ್ದು’ ತುಂಬಾ ಚೆನ್ನಾಗಿದೆ....ಉತ್ತಮ ಪ್ರತಿಮೆ...-ದಿ. ಮಡಗಾಂವಕರ್
ReplyDeleteಹಾ ಹಾ, ತುಂಬಾ ಚೆನ್ನಾಗಿ ಇದೆ ಚುಟುಕು ಕವನಗಳು....ವೆರಿ ನೈಸ್
ReplyDeleteಚಂದದ ಹನಿಗಳು :) ಬಹಳ ದಿನದ ನಂತರ....
ReplyDeleteashtenu ishta agilla divya...
ReplyDeletehaage summane barediddu ishta aayithu :)
ReplyDeletenice hani!
ReplyDeletekodsara
nallana maatu chennagide
ReplyDelete