Wednesday, September 9, 2009

ಪ್ರಶ್ನೆ


ಪ್ರತಿ ನಾಳೆ ಇಂದಾಗುತ್ತಿದೆ
"ಇಂದು" ಗಳು ನಿನ್ನೆಗಳಾಗುತಿವೆ
ಬದುಕ ಹೊಳೆ ನಿಂತ ನೀರಾಗಿದೆ
ಮನಸು ಗೊಂದಲದ ಬೀಡಾಗಿದೆ

ಸರಣಿ ಅಲಂಕಾರ ದೀಪದಲ್ಲಿ
ಚಕಚಕನೆ ಓಡುವ ಬೆಳಕಿನಂತೆ
ಚಲನೆಯ ನೋಟ ಕಂಗಳಿಗೆ ಮಾತ್ರ
ವಾಸ್ತವದ ಬದುಕು ಸ್ಥಿರವಾದ ಸ್ಥಾವರ!

ಸುಂದರ ಕಾರಂಜಿ, ಚಿಮ್ಮುತಿಹ ನೀರು
ಮನಕೆ ಆಹ್ಲಾದ ಬಾಹ್ಯ ಸೌಂದರ್ಯ
ವಾಸ್ತವದಿ ಇರುವುದು ಅದೇ ನೀರು
ಆಂತರ್ಯ ಹುಡುಕುತಿದೆ ಹೊಸತನಕಾಗಿ

ಗರಗರನೆ ತಿರುಗುವ ಧರಣಿಯದೋ
ಚಲನೆ ಭ್ರಮೆಯಾದರೂ ವಾಸ್ತವದ ಸತ್ಯ
ಬದುಕಿನ ಚಲನೆ ನಿಜವೋ - ಭ್ರಮೆಯೋ
ಎಂಬ ಪ್ರಶ್ನೆಯೇ ಮನದಲ್ಲಿ ನಿತ್ಯ

8 comments:

  1. Kavana tumba artha bharitavaagide. Vaatavavannu chennaagi arthaisiddeera. Abhinandanegalu.:)

    ReplyDelete
  2. ದಿವ್ಯಾ, ಪ್ರಶ್ನಾರ್ಥಕಗಳ ಸುರಿಮಳೆಯೇ..ಬ್ಲಾಗ್-ಕೂಟದಲ್ಲಿ ಇಂದು..??
    ವಾಸ್ತವದ ಅರಿವಿದ್ದರೂ ಭ್ರಮೆಯನ್ನು ನಂಬುವುದು ಜೀವದ ಜಾಯಮಾನ ಎಂದು ಬಹು ಸೂಚ್ಯವಾಗಿ ಕವನಿಸಿದ್ದೀರಿ...

    ReplyDelete
  3. ಚೆನ್ನಾಗಿದೆ ತಂಗಮ್ಮ ಕವನ..

    ಬದುಕ್ಯಾಕೆ ತಂಗಿ ಗೊಂದಲದ ಬೀಡು...?

    ಇರೋ ಕ್ಷಣಗಳನ್ನು ಖುಷಿಯಾಗಿ ಕಳೆದುಬಿಡು....

    -ಧರಿತ್ರಿ

    ReplyDelete
  4. ಒಳ್ಳೆಯ ಕವನ ದಿವ್ಯ ಅವ್ರೆ. ಎಲ್ಲರ ಜೀವನವೂ ಹೀಗೆಯೇ.. ಭ್ರಮೆ ಒಂದು ರೀತಿಯಲ್ಲಿ ನಮ್ಮನ್ನು ಎಂದಿಗೂ ಆವರಿಸಿರುತ್ತದೆ. ಅಂದದ ಹಾಗು ಅರ್ಥಪೂರ್ಣ ಕವನಕ್ಕೆ ವಂದನೆಗಳು :)

    ReplyDelete
  5. ಪ್ರತಿ ನಾಳೆ ಇಂದಾಗುತ್ತಿದೆ
    "ಇಂದು" ಗಳು ನಿನ್ನೆಗಳಾಗುತಿವೆ

    eshtu chennagide kavanada aaramba...

    Edde undu :)

    ReplyDelete
  6. Dear Divya
    ವಾಸ್ತವ ಯಾವುದು, ಭ್ರಮೆ ಯಾವುದು ಒಟ್ಟಿನಲ್ಲಿ ಗೊಂದಲದ ಗೂಡು ಅಲ್ಲವಾ?
    ಚಂದ್ ಜಾಲ್ಲಾ ಬರೆಯ್ಲೆಲೆ.
    thanks da for peeping into my humble ramblings
    :-)
    malathi S

    ReplyDelete
  7. ಓದಿದದವರೆಲ್ಲರ ಸಮಯಕ್ಕೆ ಕೃತಜ್ಞತೆಗಳು :)

    ReplyDelete